ಮಂಡ್ಯ ಜಿಲ್ಲೆಯಿಂದ ಓಂ ಶಕ್ತಿಗೆ ಯಾತ್ರೆಗೆ ತೆರಳಿದ್ದ ಅನೇಕ ಭಕ್ತರಿಗೆ ಕೋವಿಡ್ ಸೋಂಕು, ಅಲರ್ಟ್ ಆಯಿತು ಆರೋಗ್ಯ ಇಲಾಖೆ
ಹಿಂದೂ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ತಮಿಳುನಾಡಿನ ಮೆಲ್ಮಾರುವತ್ತೂರ್ ನಲ್ಲಿರುವ ಅರುಲ್ ಮಿಗು ಆದಿಪ್ರಶಕ್ತಿ ಸಿದ್ಧಾರ್ ಪೀಠಂಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳಾ ಭಕ್ತರು ಭೇಟಿ ನೀಡುತ್ತಾರೆ. ಕಳೆದ 2,000 ವರ್ಷಗಳಿಂದ ಇದು ಪವಿತ್ರ ಸ್ಥಳವೆನಿಸಿಕೊಂಡಿದೆ.
ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ಅನೇಕ ಮಹಿಳಾ ಭಕ್ತರು ಓಂ ಶಕ್ತಿ ಯಾತ್ರೆಗೆ ಮೆಲ್ಮಾರುವತ್ತೂರ್ ಗೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯಿಂದ ಸುಮಾರು 2,000 ಕ್ಕೂ ಹೆಚ್ಚು ಭಕ್ತರು ಪುಣ್ಯಸ್ಥಳಕ್ಕೆ ತೆರಳಿದ್ದರು ಎಂಬ ಮಾಹಿತಿ ಇದೆ. ಕೋವಿಡ್-19 ಸೋಂಕು ಅವರನ್ನು ಎಲ್ಲಿಂದ ಹಿಂಬಾಲಿಸಲು ಆರಂಭಿಸಿತೋ? ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶ್ರೀರಂಗಪಟ್ಟಣ ತಾಲ್ಲೂಕೂ ಒಂದರಲ್ಲೇ 73 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
ಮಂಡ್ಯ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಅಲರ್ಟ್ ಆಗಿಬಿಟ್ಟಿದೆ. ಯಾತ್ರೆಯಿಂದ ವಾಪಸ್ಸು ಬಂದಿರುವವರಿಗೆಲ್ಲ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುವ ಭಾಗವಾಗಿ ಅರ್ ಟಿ-ಪಿಸಿಅರ್ ಟೆಸ್ಟ್ಗಳನ್ನು ಮಾಡಲಾಗುತ್ತಿದೆ. ಸ್ಯಾಂಪಲ್ ಸಂಗ್ರಹಿಸಿದ ಬಳಿಕ ರಿಸಲ್ಟ್ ಬರುವವರೆಗೆ ಅವರನ್ನು ಲಭ್ಯವಿರುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕ್ವಾರಂಟೀನ್ ಮಾಡಲಾಗುತ್ತಿದೆ.
ಹಿಂದೂ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ತಮಿಳುನಾಡಿನ ಮೆಲ್ಮಾರುವತ್ತೂರ್ ನಲ್ಲಿರುವ ಅರುಲ್ ಮಿಗು ಆದಿಪ್ರಶಕ್ತಿ ಸಿದ್ಧಾರ್ ಪೀಠಂಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳಾ ಭಕ್ತರು ಭೇಟಿ ನೀಡುತ್ತಾರೆ. ಕಳೆದ 2,000 ವರ್ಷಗಳಿಂದ ಇದು ಪವಿತ್ರ ಸ್ಥಳವೆನಿಸಿಕೊಂಡಿದೆ. ಬೇರೆ ಬೇರೆ ಧರ್ಮಗಳಿಗೆ ಸೇರಿದ 21 ಮಹಿಳೆ ಮತ್ತ ಪುರುಷ ಸಿದ್ಧಾರ್ಗಳು ಇಲ್ಲಿ ತಮ್ಮ ಜೀವ ಸಮಾಧಿಗಳನ್ನು ಹೊಂದಿದ್ದಾರೆ.
ಈ ಸ್ಥಳದಲ್ಲಿ ಒಬ್ಬ ಮಹಿಳಾ ಸಿದ್ಧಾರ್ ವಾಸವಾಗಿದ್ದು ತನ್ನ ಸನ್ನಿಧಿಗೆ ಬರುವ ಭಕ್ತಾದಿಗಳನ್ನು ಹರಸುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗೇ, ಇಲ್ಲಿಗೆ ಬರುವ ಭಕ್ತಾದಿಗಳಲ್ಲಿ ಹೆಚ್ಚಿನವರು ಮಹಿಳೆಯರೇ ಅಗಿರುತ್ತಾರೆ.
ಇದನ್ನೂ ಓದಿ: ವಿಜಯೋತ್ಸವದಲ್ಲಿ ಡ್ಯಾನ್ಸ್ ಮಾಡಿದ ಯುವಕರ ಮೇಲೆ ಹಣದ ಹೊಳೆ ಹರಿಸಿದ ಬಿಜೆಪಿ ಕಾರ್ಯಕರ್ತರು, ಡಿಸೆಂಬರ್ 30ರ ವಿಡಿಯೋ ವೈರಲ್