Delhi Assembly Poll Results; ಜನ ಬದಲಾವಣೆ ಬಯಸಿದ್ದರು ಮತ್ತು ಬದಲಾವಣೆಗಾಗಿ ವೋಟು ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ, ಸಂಸದೆ

Updated on: Feb 08, 2025 | 2:16 PM

ತಮ್ಮ ಪಕ್ಷದ ಬಗ್ಗೆ ಮಾತಾಡಿದ ಪ್ರಿಯಾಂಕಾ, ತಾವೆಲ್ಲ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕಿದೆ ಅನ್ನೋದನ್ನು ಈ ಚುನಾವಣೆ ನಿರೂಪಿಸಿದೆ, ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಏನೇ ಹೇಳಿದರೂ ದೆಹಲಿಯಲ್ಲಿ ಕಾಂಗ್ರೆಸ್ ಗೆ ಇಂಥ ಸ್ಥಿತಿ ಬಂದೀತು ಅಂತ ಕಟ್ಟಾ ಕಾಂಗ್ರೆಸ್ ಭಕ್ತನೂ ಎಣಿಸಿರಲಿಲ್ಲ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದೆ. ಹೆಚ್ಚು ಕಡಿಮೆ ಒಂದೂವರೆ ಶತಮಾನದ ಇತಿಹಾಸವಿರುವ ಪಕ್ಷಕ್ಕೆ ರಾಷ್ಟ್ರದ ರಾಜಧಾನಿಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲಾಗಿಲ್ಲವೆಂದರೆ ಪಕ್ಷದ ಶೋಚನೀಯ ಸ್ಥಿತಿಯನ್ನು ಅಂದಾಜಿಸಬಹುದು. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿಯ ಜನ ಬದಲಾವಣೆ ಬಯಸಿದ್ದರು ಮತ್ತ್ತು ಬದಲಾವಣೆಗಾಗಿ ವೋಟ್ ಮಾಡಿದ್ದಾರೆ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಸಭೆಗಳಲ್ಲಿ ಈ ಅಂಶ ಗೊತ್ತಾಗಿತ್ತು, ಗೆದ್ದವರಿಗೆಲ್ಲ ಅಭಿನಂದನೆಗಳು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Delhi Election Result Live: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನೇರ ಪ್ರಸಾರ