ನನ್ನ ಮನೆಗೆ ಎಲ್ಲ ಸಮುದಾಯದವರು ಬರುತ್ತಾರೆ, ಸ್ವಾಮೀಜಿ ಖುದ್ದು ಬಂದು ನೋಡಲಿ: ಕುಮಾರಸ್ವಾಮಿ
ನನ್ನ ಮನೆಯಲ್ಲಿ ಯಾವುದೇ ಸಮುದಾಯದವರು ಮುಕ್ತವಾಗಿ ಓಡಾಡಬಹುದು, ಸ್ವಾಮೀಜಿಯವರು ಬಂದು ನನ್ನ ಮನೆಯಲ್ಲಿ ಎರಡು ದಿನ ವಾಸ ಮಾಡಲಿ, ಮತ್ತು ಎಲ್ಲವನ್ನು ನೋಡಲಿ, ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು
ಬೆಂಗಳೂರು: ದಲಿತರನ್ನು ದೇವಾಸ್ಥಾನಗಳ ಅರ್ಚಕರಾಗಿ ನೇಮಕ ಮಾಡುತ್ತೀರಾ ಅಂತ ಮಂಗಳವಾರದಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಸದನದಲ್ಲಿ ಸರಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸ್ವಾಮೀಜಿಯೊಬ್ಬರು (Swamiji) ಕುಮಾರಸ್ವಾಮಿ ತಮ್ಮ ಮನೆಯಲ್ಲಿ ದಲಿತರನ್ನು ಬರಮಾಡಿಕೊಳ್ಳುತ್ತಾರೆಯೇ ಅಂತ ಪ್ರಶ್ನಿಸಿದ್ದಾರೆ. ಬುಧವಾರ ಸದನದ ಕಲಾಪಗಳಲ್ಲಿ (assembly proceedings) ಭಾಗವಹಿಸಲು ತೆರಳುವ ಮುನ್ನ ಕುಮಾರಸ್ವಾಮಿಯವರಿಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿ ಅಲ್ಲಿಗೆ ಯಾರೆಲ್ಲ ಬರ್ತಾರೆ ಅಂತ ಗಮನಿಸಲು ಹೇಳಿದರು. ಜನರು ತಮ್ಮ ದೂರು ದುಮ್ಮಾನಗಳನ್ನು ಹೇಳಿಕೊಳ್ಳಲು, ನೆರವು ಕೇಳಲು ಬೆಳಿಗ್ಗೆ 5:30 ರಿಂದ ಮನೆಗೆ ಬರಲಾರಂಭಿಸುತ್ತಾರೆ. ಪ್ರತಿದಿನ ತಮ್ಮ ಮನೆಗೆ ನೂರಾರು ಜನ ಬರುತ್ತಾರೆ, ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಅದರೆ ಯಾರಿಗೂ ನೀವು, ದಲಿತರಾ, ಲಿಂಗಾಯತರಾ, ಬ್ರಾಹ್ಮಣರಾ ಅಂತ ಕೇಳುವುದಿಲ್ಲ, ಅವರ ಕಷ್ಟ ಕೇಳಿ ಸಹಾಯ ಮಾಡುತ್ತೇನೆ ಎಂದು ಅವರು ಹೇಳಿದರು.
ನನ್ನ ಮನೆಯಲ್ಲಿ ಯಾವುದೇ ಸಮುದಾಯದವರು ಮುಕ್ತವಾಗಿ ಓಡಾಡಬಹುದು, ಸ್ವಾಮೀಜಿಯವರು ಬಂದು ನನ್ನ ಮನೆಯಲ್ಲಿ ಎರಡು ದಿನ ವಾಸ ಮಾಡಲಿ, ಮತ್ತು ಎಲ್ಲವನ್ನು ನೋಡಲಿ, ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಮೀಸಲು ಕ್ಷೇತ್ರಗಳಿಂದ ವಿಧಾನ ಸಭೆಗೆ ಆಯ್ಕೆಯಾಗುವ ಶಾಸಕರು ಬಹಳ ಸೂಕ್ಷ್ಮಾವಾಗಿ ಕಾರ್ಯನಿರ್ವಹಿಸುವಂಥ ಸ್ಥಿತಿ ಇದೆ, ಇದನ್ನೆಲ್ಲ ಬುಧವಾರದಂದು ಸದನದಲ್ಲಿ ಚರ್ಚೆ ಮಾಡುವುದಾಗಿ ಅವರು ಅವರು ಹೇಳಿದರು.
ಬುಧವಾರದಂದು ರಾಮಮನಗದಲ್ಲಿ ಅಯೋಜಿಸಲಾಗಿದ್ದ ಲೋಕಕಲ್ಯಾಣ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಅಗಮಿಸಿದ್ದ ವಿಷಯವನ್ನು ಕುಮಾರಸ್ವಾಮಿ ಅವರು ಹೇಳಿದರು. ತಾನು ಬೆಂಗಳೂರಿಗೆ ಬರುವ ಮೊದಲು ಪೂಜೆಯಲ್ಲಿ ಪಾಲ್ಗೊಂಡಿದ್ದಾಗಿ ಅವರು ತಿಳಿಸಿದರು.
ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್ಡಿ ಕುಮಾರಸ್ವಾಮಿ ಆಗ್ರಹ