ರಾಮನಗರದ ಹೊರವಲಯದ ಕೆರೆಯಲ್ಲಿ ಪ್ರತ್ಯಕ್ಷವಾಯಿತೊಂದು ಸಲಗ, ಜನರಲ್ಲಿ ಆತಂಕ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 23, 2022 | 2:07 PM

ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ.

ರಾಮನಗರದ ಹೊರವಯದಲ್ಲಿರುವ ಬೋಳಪ್ಪನ ಕೆರೆಯಲ್ಲಿ (Bolappana Lake) ಬುಧವಾರ ಬೆಳ್ಳಂಬೆಳಗ್ಗೆಯೇ ಕಾಡಾನೆಯೊಂದು (wild elephant) ಪ್ರತ್ಯಕ್ಷವಾಗಿ ನಗರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಜನ ಅರಣ್ಯ ಇಲಾಖೆ ಅಧಿಕಾರಿಗಳಿಗೆ (forest officials) ದೂರು ನೀಡಿದ್ದಾರಾದರೂ ಮಧ್ಯಾಹ್ನದ ಹೊತ್ತಿನವರೆಗೆ ಸಿಬ್ಬಂದಿ ಅಲ್ಲಿ ಸುಳಿದಿಲಿಲ್ಲ. ಏತನ್ಮಧ್ಯೆ, ಕೆಲ ಧೈರ್ಯಶಾಲಿ ಜನ ಕೆರೆಯ ಬಳಿ ಹೋಗಿ ಸಲಗ ಫೋಟೋಗಳನ್ನು ತೆಗೆದಿದ್ದಾರೆ ಮತ್ತು ವಿಡಿಯೋಗಳನ್ನೂ ಮಾಡಿದ್ದಾರೆ.