ಮಂಡ್ಯದ ಹೊಸಹಳ್ಳಿಯಲ್ಲೂ ಕರೆಂಟ್ ಬಿಲ್ ಕಟ್ಟಲ್ಲ ಎಂದು ಬಿಗಿಪಟ್ಟು

ಮಂಡ್ಯದ ಹೊಸಹಳ್ಳಿಯಲ್ಲೂ ಕರೆಂಟ್ ಬಿಲ್ ಕಟ್ಟಲ್ಲ ಎಂದು ಬಿಗಿಪಟ್ಟು

ಆಯೇಷಾ ಬಾನು
|

Updated on: May 21, 2023 | 3:04 PM

ಮಂಡ್ಯ ಜಿಲ್ಲೆಯ ಹೊಸಹಳ್ಳಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಾವು ಕರೆಂಟ್ ಬಿಲ್​ ಕಟ್ಟೋದಿಲ್ಲ. 200 ಯೂನಿಟ್​ ಒಳಗೆ ವಿದ್ಯುತ್​ ಬಳಸ್ತಿದ್ದೇವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮಂಡ್ಯ: ಮೇ 10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಫಲಿತಾಂಶ(Karnataka Assembly Elections 2023 Result) ಮೇ 13 ರಂದು ಬಂದಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುವುದರೊಂದಿಗೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ. ಜೊತೆಗೆ ಮೇ 20ರಂದು ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ತೆಗೆದುಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ವಿದ್ಯುತ್​ ಬಿಲ್ ಕಟ್ಟಲ್ಲವೆಂಬ ಕೂಗು ರಾಜ್ಯದಲ್ಲಿ ಜೋರಾಗಿದೆ. ಮಂಡ್ಯ ಜಿಲ್ಲೆಯ ಹೊಸಹಳ್ಳಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಾವು ಕರೆಂಟ್ ಬಿಲ್​ ಕಟ್ಟೋದಿಲ್ಲ. 200 ಯೂನಿಟ್​ ಒಳಗೆ ವಿದ್ಯುತ್​ ಬಳಸ್ತಿದ್ದೇವೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.