ಚಿಕ್ಕಮಗಳೂರು: ಹರಿಯುತ್ತಿದ್ದ ನೀರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಹುಚ್ಚು ಸಾಹಸ, ಸಾವಿನಿಂದ ಪಾರಾಗಿದ್ದೇ ಪವಾಡ!
ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.
ಚಿಕ್ಕಮಗಳೂರು: ಗಾಳಿ, ನೀರು ಮತ್ತು ಬೆಂಕಿ ನಮಗೆಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಇವುಗಳೊಂದಿಗೆ ಚೆಲ್ಲಾಟವಾಡುವುದ ಮೃತ್ಯುವಿಗೆ ಆಹ್ವಾನವಿತ್ತಂತೆ. ಚಿಕ್ಕಮಗಳೂರು (Chikmagalur) ಜಿಲ್ಲೆಯ ಸಖರಾಯಪಟ್ಟಣದಲ್ಲಿ (Sakharayapatna) ಕಾರಿನಲ್ಲಿ ಪಯಣಿಸುತ್ತಿದ್ದ ಕೆಲವರು ರಸ್ತೆ ಮೇಲೆ 5 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದ್ದರೂ ಕಾರು ಓಡಿಸಿಕೊಂಡು ಹೋಗುವ ಹುಚ್ಚು ಸಾಹಸ ಮಾಡಿದ್ದಾರೆ. ಅದೃಷ್ಟವಶಾತ್ ಸ್ಥಳೀಯರು ಅವರನ್ನು ಗಮನಿಸಿದ್ದರಿಂದ ಪವಾಡಸದೃಶ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ಅವರನ್ನು ಹೊರಗೆತ್ತಲಾಗಿದೆ.
Latest Videos