ಮುಸಲ್ಮಾನರೇ ಇಲ್ಲದ ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಹಿಂದೂಗಳು ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ
ಆದರೂ ಊರಿನ ಹಿಂದೂ ಕುಟುಂಬಗಳು ಮೊಹರಂ ಹಬ್ಬವನ್ನು ಅಷ್ಟೇ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕೊಪ್ಪಳ ತಾಲ್ಲೂಕಿನ ಹೂವಿನಾಳ ಗ್ರಾಮದಲ್ಲೂ ಹಿಂದೂ ಕುಟುಂಬಗಳು ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದನ್ನು ನೋಡಬಹುದು.
ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಮೊಹರಂ (Muharrum) ಹಬ್ಬ ಹಿಂದೂ-ಮುಸ್ಲಿಂ ಭಾವೈಕ್ಯತೆಯ (harmony) ಸಂಕೇತವಾಗಿದೆ. ಈ ಭಾಗದ ಬಹತೇಕ ಜಿಲ್ಲೆಗಳಲ್ಲಿ ಈ ಹಬ್ಬವನ್ನು ಎರಡೂ ಸಮುದಾಯದ (communities) ಜನ ಸೇರಿ ಆಚರಿಸುತ್ತಾರೆ. ಅದು ಸರಿ, ಕೊಪ್ಪಳ ಜಿಲ್ಲೆಯ ಗಡಚಿಂತಿ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೂ ಊರಿನ ಹಿಂದೂ ಕುಟುಂಬಗಳು ಮೊಹರಂ ಹಬ್ಬವನ್ನು ಅಷ್ಟೇ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕೊಪ್ಪಳ ತಾಲ್ಲೂಕಿನ ಹೂವಿನಾಳ ಗ್ರಾಮದಲ್ಲೂ ಹಿಂದೂ ಕುಟುಂಬಗಳು ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದನ್ನು ನೋಡಬಹುದು.
Latest Videos