ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದ ಜಿಟಿ ಜಿಟಿ ಮಳೆ: ಹಬ್ಬದ ಖರೀದಿಗೆಂದು ಬಂದವರಿಗೆ ವರುಣನ ಕಾಟ
ತಮಿಳುನಾಡಿಗೆ ಈಶಾನ್ಯ ಮುಂಗಾರು ಪ್ರವೇಶ ಮಾಡಿದ್ದು ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ. ಮುಂದಿನ ಹತ್ತು ದಿನಗಳ ಕಾಲ ಮಳೆಯಾಗಲಿದೆ ಎಂದು ತಿಳಿಸಿದೆ. ಅದರಂತೆ ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಶುರುವಾಗಿದೆ. ಇಂದು(ಅಕ್ಟೋಬರ್ 22) ಬೆಳ್ಳಂಬೆಳಗ್ಗೆ ಹಬ್ಬದ ಖರೀದಿಗೆಂದು ಮಾರ್ಕೆಟ್ ಗೆ ಹೋದವರಿಗೆ ವರುಣ ಕಿರಿಕಿರಿ ಉಂಟುಮಾಡಿದ್ದಾನೆ. ಅದರಲ್ಲೂ ಕೆಆರ್ ಮಾರ್ಕೆಂಟ್ ನಲ್ಲಿ ಮಳೆ ನಡುವೆಯೂ ಜನರು ಹಬ್ಬದ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು, (ಅಕ್ಟೋಬರ್ 22): ತಮಿಳುನಾಡಿಗೆ ಈಶಾನ್ಯ ಮುಂಗಾರು ಪ್ರವೇಶ ಮಾಡಿದ್ದು ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ. ಮುಂದಿನ ಹತ್ತು ದಿನಗಳ ಕಾಲ ಮಳೆಯಾಗಲಿದೆ ಎಂದು ತಿಳಿಸಿದೆ. ಅದರಂತೆ ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಶುರುವಾಗಿದೆ. ಇಂದು(ಅಕ್ಟೋಬರ್ 22) ಬೆಳ್ಳಂಬೆಳಗ್ಗೆ ಹಬ್ಬದ ಖರೀದಿಗೆಂದು ಮಾರ್ಕೆಟ್ ಗೆ ಹೋದವರಿಗೆ ವರುಣ ಕಿರಿಕಿರಿ ಉಂಟುಮಾಡಿದ್ದಾನೆ. ಅದರಲ್ಲೂ ಕೆಆರ್ ಮಾರ್ಕೆಂಟ್ ನಲ್ಲಿ ಮಳೆ ನಡುವೆಯೂ ಜನರು ಹಬ್ಬದ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್, ಕೆ.ಜಿ.ರಸ್ತೆ, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್ ವೃತ್ತ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಬಸವನಗುಡಿ, ಜಯನಗರ, ತ್ಯಾಗರಾಜನಗರ, ಹನುಮಂತನಗರ, ಶ್ರೀನಗರ, ವಿಜಯನಗರ, ಮೈಸೂರು ರಸ್ತೆ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರ ಸೇರಿದಂತೆ ಸುತ್ತಮುತ್ತ ಮಳೆಯಾಗುತ್ತಿದೆ.
