ನಮ್ಮ ಕೆಲಸ ಖಾಯಂ ಮಾಡದಿದ್ದರೆ ವಿಧಾನಸೌಧದ ಮುಂದೆ ವಿಷ ಕುಡಿಯುತ್ತೇವೆ
ಅನುದಾನಿತ ಶಾಲಾ ಶಿಕ್ಷಕರ ಖಾಯಂ ನೇಮಕಾತಿ ಮಾಡುವಂತೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು: ಅನುದಾನಿತ ಶಾಲಾ ಶಿಕ್ಷಕರ (Teachers) ಖಾಯಂ ನೇಮಕಾತಿ ಮಾಡುವಂತೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ. ನಮ್ಮ ಕೆಲಸವನ್ನು ಖಾಯಂ ಮಾಡದಿದ್ದರೆ ವಿಧಾನಸೌಧದ ಮುಂದೆಯೇ ವಿಷ ಕುಡಿಯುತ್ತೇವೆ ಎಂದು ಮನವಿ ಸಲ್ಲಿಸುವಾಗ ಶಿಕ್ಷಕರು ಕಣ್ಣೀರು ಹಾಕಿದ್ದಾರೆ. 576 ಶಿಕ್ಷಕರ ಭವಿಷ್ಯ ಪ್ರಶ್ನೆಯಾಗಿದ್ದು, ಚುನಾವಣಾ ನೀತಿ ಜಾರಿ ಒಳಗಡೆ ಸರ್ಕಾರಿ ಇದನ್ನ ಮಾಡಿಕೊಡಬೇಕು, ಇಲ್ಲವೆಂದರೆ ನಾವು ನಮ್ಮ ಊರಿಗೆ ಹೋಗುವುದಿಲ್ಲ. ಸಿಎಂ ಮುಂದೆಯೇ ವಿಷ ಕುಡಿಯುತ್ತೇವೆ ಎಂದು ಅಳಲು ತೊಡಿಕೊಂಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Mar 08, 2023 08:58 PM