AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು

PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು

ಝಾಹಿರ್ ಯೂಸುಫ್
|

Updated on:Apr 11, 2026 | 12:09 PM

Share

ಈ ಭರ್ಜರಿ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ತಂಡವು ತನ್ನದೇ ದಾಖಲೆ ಮುರಿದಿರುವುದು ವಿಶೇಷ. ಅಂದರೆ ಪಿಎಸ್​ಎಲ್ 2025 ರಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಪೇಶಾವರ್ ಝಲ್ಮಿ 120 ರನ್‌ಗಳ ಅಂತರದಿಂದ ಗೆದ್ದಿದ್ದು ಈವರೆಗಿನ ಶ್ರೇಷ್ಠ ಗೆಲುವಾಗಿತ್ತು. ಇದೀಗ ಬರೋಬ್ಬರಿ 159 ರನ್​ಗಳ ಅಮೋಘ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ಹೊಸ ಇತಿಹಾಸ ನಿರ್ಮಿಸಿದೆ.

ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿ ತಂಡವು ಕರಾಚಿ ಕಿಂಗ್ಸ್ ವಿರುದ್ಧ 159 ರನ್‌ಗಳ ಬೃಹತ್ ಅಂತರದಿಂದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ಇದು ರನ್‌ಗಳ ಅಂತರದ ಆಧಾರದ ಮೇಲೆ PSL ಇತಿಹಾಸದಲ್ಲೇ ದಾಖಲಾದ ಅತಿದೊಡ್ಡ ವಿಜಯವಾಗಿದೆ.

ಈ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪೇಶಾವರ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 246 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ ತಂಡವು 16.1 ಓವರ್​ಗಳಲ್ಲಿ 87 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪೇಶಾವರ್ ಝಲ್ಮಿ ತಂಡವು ಬರೋಬ್ಬರಿ 159 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ತಂಡವು ತನ್ನದೇ ದಾಖಲೆ ಮುರಿದಿರುವುದು ವಿಶೇಷ. ಅಂದರೆ ಪಿಎಸ್​ಎಲ್ 2025 ರಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಪೇಶಾವರ್ ಝಲ್ಮಿ 120 ರನ್‌ಗಳ ಅಂತರದಿಂದ ಗೆದ್ದಿದ್ದು ಈವರೆಗಿನ ಶ್ರೇಷ್ಠ ಗೆಲುವಾಗಿತ್ತು. ಇದೀಗ ಬರೋಬ್ಬರಿ 159 ರನ್​ಗಳ ಅಮೋಘ ಗೆಲುವಿನೊಂದಿಗೆ ಪೇಶಾವರ್ ಝಲ್ಮಿ ಹೊಸ ಇತಿಹಾಸ ನಿರ್ಮಿಸಿದೆ.

ಈ ಮೂಲಕ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ 150 ರನ್​ಗಳ ಅಂತರದಿಂದ ಗೆದ್ದ ಮೊದಲ ತಂಡವೆಂಬ ಭರ್ಜರಿ ದಾಖಲೆಯೊಂದನ್ನು ಪೇಶಾವರ್ ಝಲ್ಮಿ ತಂಡ ತನ್ನದಾಗಿಸಿಕೊಂಡಿದೆ.

Published on: Apr 11, 2026 12:07 PM
Follow Us