ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ

Edited By:

Updated on: Mar 04, 2026 | 3:41 PM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಫೋನ್ ಟ್ಯಾಪಿಂಗ್ ಕದನ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೊದಲು ಫೋನ್ ಟ್ಯಾಪಿಂಗ್ ಅರೋಪ ಮಾಡಿದ್ದು, ಇದಕ್ಕೆ ಸಿಎಂ ಪ್ರತಿಕ್ರಿಯಿಸಿ ನಮ್ಮದು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಇದೀಗ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅವರು ನಾವು ಮಾಡ್ತಿಲ್ಲ ಎಂದು ಗೃಹ ಸಚಿವರು ನಿರಾಕರಿಸಿಲ್ಲ. ಯಾರದ್ದು ಮಾಡ್ತಿದ್ದಾರೆ ಪೋನ್ ಕದ್ದಾಲಿಕೆಯನ್ನು ವಿರೋಧ ಪಕ್ಷದವರದು ಮಾಡ್ತಿದ್ದಾರಾ? ಅಥವಾ ಡಿ ಕೆ‌ ಶಿವಕುಮಾರ್ ಅವರದು ಮಾಡ್ತಿದ್ದಾರೆ? ಈ ಬಗ್ಗೆ ಮೊದಲು ನ್ಯಾಯಾಂಗ ತನಿಖೆಯಾಗಲಿ ಎಂದಿದ್ದಾರೆ. ಅಲ್ಲದೇ ನಿಮ್ಮದು ಹಾಲು ಜೇನು ಅಲ್ಲಆಲ್ಕೋಹಾಲ್ ಜೇನು ಇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಹುಬ್ಬಳ್ಳಿ, (ಮಾರ್ಚ್ 04): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಫೋನ್ ಟ್ಯಾಪಿಂಗ್ ಕದನ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೊದಲು ಫೋನ್ ಟ್ಯಾಪಿಂಗ್ ಅರೋಪ ಮಾಡಿದ್ದು, ಇದಕ್ಕೆ ಸಿಎಂ ಪ್ರತಿಕ್ರಿಯಿಸಿ ನಮ್ಮದು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಇದೀಗ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅವರು ನಾವು ಮಾಡ್ತಿಲ್ಲ ಎಂದು ಗೃಹ ಸಚಿವರು ನಿರಾಕರಿಸಿಲ್ಲ. ಯಾರದ್ದು ಮಾಡ್ತಿದ್ದಾರೆ ಪೋನ್ ಕದ್ದಾಲಿಕೆಯನ್ನು ವಿರೋಧ ಪಕ್ಷದವರದು ಮಾಡ್ತಿದ್ದಾರಾ? ಅಥವಾ ಡಿ ಕೆ‌ ಶಿವಕುಮಾರ್ ಅವರದು ಮಾಡ್ತಿದ್ದಾರೆ? ಈ ಬಗ್ಗೆ ಮೊದಲು ನ್ಯಾಯಾಂಗ ತನಿಖೆಯಾಗಲಿ ಎಂದಿದ್ದಾರೆ. ಅಲ್ಲದೇ ನಿಮ್ಮದು ಹಾಲು ಜೇನು ಅಲ್ಲಆಲ್ಕೋಹಾಲ್ ಜೇನು ಇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

Loading...
Unable to load recommendations.
Follow Us
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More