ಅಯೋಧ್ಯೆಗೂ ಬಂತು ಪಿಂಕ್ ಆಟೋರಿಕ್ಷಾ ಸೇವೆ, ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಯುಪಿ ಸರ್ಕಾರದ ಯೋಜನೆ

|

Updated on: Jan 17, 2024 | 3:07 PM

ಪಿಂಕ್ ಆಟೋರಿಕ್ಷಾಗಳ ಸೇವೆ ಜೈಪುರ, ಗೋವಾ ಮತ್ತು ನೋಯ್ಡಾದಲ್ಲೂ ಇದೆ. ಆಟೋರಿಕ್ಷಾ ಓಡಿಸುವುದನ್ನು ಕಲಿಸಲು ಯುಪಿ ಸರ್ಕಾರ ದೆಹಲಿಯಿಂದ ಮಹಿಳಾ ಚಾಲಕರನ್ನು ಕರೆಸಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಮಹಿಳೆಯಲ್ಲದೆ ಇನ್ನೂ 10-12 ಮಹಿಳೆಯರು ತರಬೇತಿ ನೀಡಲು ಅಯೋಧ್ಯೆಗೆ ಬಂದಿದ್ದಾರೆ.

ಅಯೋಧ್ಯೆ: ಪಿಂಕ್ ಆಟೋರಿಕ್ಷಾ (pink autorickshaw) ಪರಿಕಲ್ಪನೆ ಮತ್ತು ಸೇವೆ ರಾಮನೂರು ಅಯೋಧ್ಯೆಯಲ್ಲೂ (Ayodhya) ಶುರುವಾಗಿದೆ. ಈ ಆಟೋರಿಕ್ಷಾಗಳನ್ನು ಮಹಿಳೆಯರು ಮಾತ್ರ ಓಡಿಸಬೇಕು, ಅವರು ಸ್ವಾವಲಂಬಿ (self reliant) ಬದುಕು ನಡೆಸುವಂತಾಗಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದ ಟಿವಿ9 ಕನ್ನಡ ವಾಹಿನಿಯ ವರದಿಗಾರ ಹೇಳುತ್ತಾರೆ. ಪಿಂಕ್ ಆಟೋರಿಕ್ಷಾಗಳ ಸೇವೆ ಜೈಪುರ, ಗೋವಾ ಮತ್ತು ನೋಯ್ಡಾದಲ್ಲೂ ಇದೆ. ಆಟೋರಿಕ್ಷಾ ಓಡಿಸುವುದನ್ನು ಕಲಿಸಲು ಯುಪಿ ಸರ್ಕಾರ ದೆಹಲಿಯಿಂದ ಮಹಿಳಾ ಚಾಲಕರನ್ನು ಕರೆಸಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಮಹಿಳೆಯಲ್ಲದೆ ಇನ್ನೂ 10-12 ಮಹಿಳೆಯರು ತರಬೇತಿ ನೀಡಲು ಅಯೋಧ್ಯೆಗೆ ಬಂದಿದ್ದಾರೆ. ಯೋಗಿ ಅವರ ಸರ್ಕಾರ ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿವ ಟ್ರೇನರ್ ಮಹಿಳೆ, ಸ್ಥಳೀಯ 2-3 ಸ್ತ್ರೀಯರು ತರಬೇತಿಗಾಗಿ ತನ್ನಲ್ಲಿಗೆ ಬರುತ್ತಾರೆ ಎಂದು ಹೇಳುತ್ತಾರೆ. ಅಯೋಧ್ಯೆಯಲ್ಲಿ ಸದ್ಯಕ್ಕೆ 25 ಪಿಂಕ್ ಆಟೋಗಳಿದ್ದು ಅವುಗಳನ್ನು ಓಡಿಸಿ ಮಹಿಳೆಯರು ದಿನವೊಂದಕ್ಕೆ ರೂ. 1,000-1,500 ಗಳಿಸಬಹುದೆಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ