PM Modi in Karnataka Live: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಲೈವ್ ವಿಡಿಯೋ
ವಿಧಾನಸಭೆ ಯುದ್ಧಕ್ಕೆ ಕಾಲ ಸನ್ನಿಹಿತವಾದಂತೆ ಕೇಸರಿ ಮನೆಯಲ್ಲಿ ಅತಿರಥರ ಕರುನಾಡ ಎಂಟ್ರಿ ಜೋರಾಗ್ತಿದೆ. ಪ್ರಧಾನಿ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಉತ್ತರ ಕರ್ನಾಟಕಕ್ಕೆ ಕಳೆದ ಬಾರಿ ಎಂಟ್ರಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಯುವಜನೋತ್ಸವದ ನೆಪದಲ್ಲಿ ಯುವಕರ ಮನಗೆದಿದ್ದರು. ಹುಬ್ಬಳ್ಳಿಯಲ್ಲಿ ಸರಿ ಸುಮಾರು 8 ಕಿಲೋ ಮೀಟರ್ ರೋಡ್ ಶೋ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರಾಂತಿ ಎಬ್ಬಿಸೋಕೆ, ಕೇಸರಿ ಶಂಖನಾದ ಮೊಳಗಿಸೋಕೆ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು, ಈಗಾಗಲೇ ಕಲಬುರಗಿ ಜಿಲ್ಲೆಗೆ ಕಾಲಿಟ್ಟಿದ್ದಾರೆ. ಕಲಬುರಗಿ ಹಾಗೂ ಯಾದಗಿರಿಗೆ ಜಿಲ್ಲೆಗೆ ಭೇಟಿ ನೀಡಲಿರುವ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯಲ್ಲಿ ಹವಾ ಎಬ್ಬಿಸೋ ಮೂಲಕ ಕಾಂಗ್ರೆಸ್ಗೆ ಟಕ್ಕರ್ ಕೊಡೋಕೆ ಪ್ಲ್ಯಾನ್ ಮಾಡಿದ್ದಾರೆ. ಇದೆಲ್ಲದರ ನಡುವೆ ಕಲ್ಯಾಣ ಕರ್ನಾಟಕ ಗೆಲ್ಲುವ ಗುರಿ ಹೊಂದಿರುವ ಪ್ರಧಾನಿ ಮೋದಿ ಇಂದು ಸುಮಾರು 10,000 ಕೋಟಿ ರೂ ಮೌಲ್ಯದ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬನ್ನಿ ಇದರೆಲ್ಲದರ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಪಡೆಯಿರಿ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ