ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಪ್ರಧಾನಿ ಮೋದಿ ಪ್ರಯಾಣ

Updated on: Aug 22, 2025 | 9:10 PM

ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಪ್ರಯಾಣ ಮಾಡಿ ಮೆಟ್ರೋ ಯೋಜನೆಗಳಲ್ಲಿ ಭಾಗಿಯಾಗಿರುವ ಶಾಲಾ ವಿದ್ಯಾರ್ಥಿಗಳು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಇಂದು ಉದ್ಘಾಟನೆಯಾದ ಹೌರಾ ಮೆಟ್ರೋ ನಿಲ್ದಾಣ ಭಾರತದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವಾಗಿದೆ. ಇದು ಮೇಲ್ಮೈಯಿಂದ 33 ಮೀಟರ್ ಕೆಳಗೆ ಇದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಇಂದು 1,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 6 ಪಥಗಳ ಕೋನಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕೊಲ್ಕತ್ತಾ, ಆಗಸ್ಟ್ 22: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇಂದು ಮಹತ್ವದ ಮೂರು ಮೆಟ್ರೋ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. ಈ ವೇಳೆ ನೂತನವಾಗಿ ಉದ್ಘಾಟನೆಗೊಂಡ ಕೊಲ್ಕತ್ತಾದ ಮೆಟ್ರೋದಲ್ಲಿ ಶಾಲಾ ವಿದ್ಯಾರ್ಥಿಗಳು, ನಿರ್ಮಾಣ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಪ್ರಯಾಣಿಸಿದ್ದು, ಅವರೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಉದ್ಘಾಟನೆಯಾದ ಹೌರಾ ಮೆಟ್ರೋ ನಿಲ್ದಾಣ ಭಾರತದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣವಾಗಿದೆ. ಇದು ಮೇಲ್ಮೈಯಿಂದ 33 ಮೀಟರ್ ಕೆಳಗೆ ಇದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಇಂದು 1,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 6 ಪಥಗಳ ಕೋನಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ