Karnataka Assembly Session: ಅನುದಾನಕ್ಕಾಗಿ ಪಟ್ಟುಹಿಡಿದ ವಿಪಕ್ಷ ಶಾಸಕರಿಂದ ಸದನದ ಬಾವಿಗಿಳಿದು ಮುಖ್ಯಮಂತ್ರಿ ಮೇಲೆ ಒತ್ತಡ!
ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಒತ್ತಡದಿಂದ ತಾಳ್ಮೆ ಕಳೆದುಕೊಳ್ಳಲಾರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷರ ಕಡೆ ತಿರುಗಿ ನಾನಿನ್ನೂ ಸ್ಟೇಟ್ಮೆಂಟ್ ಮಾಡಬೇಕಿದೆ ಅನ್ನುತ್ತಾರೆ. ಯುಟಿ ಖಾದರ್ ಅವರು, ಎಲ್ಲರೂ ನಿಮ್ಮ ಸ್ಥಳಿಗಳಿಗೆ ಹೋಗಿ, ಹೀಗೆ ಮಾಡಿದರೆ ಅವರು ಶಾಸಕರಿಗೆ ನೀಡಬೇಕೆಂದಿರುವ ಅನುದಾನ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಸಿದ್ದರಾಮಯ್ಯ ಮತ್ತೊಮ್ಮೆ, ಶಾಸಕರ ಸಭೆ ನಡೆಸಿ, ಆ್ಯಕ್ಷನ್ ಪ್ಲ್ಯಾನ್ ನೋಡಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡುತ್ತಾರೆ.
ಬೆಂಗಳೂರು, ಆಗಸ್ಟ್ 22: ವಿಧಾನಸಭಾ ಅಧಿವೇಶನದಲ್ಲಿ ಇಂದು ಅನುದಾನಗಳಿಗೆ ಸಂಬಂಧಿಸಿಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ಶಾಸಕರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು ಮತ್ತು ಶಾಸಕರು ಸದನದ ಬಾವಿಗಿಳಿದು (well of House) ಅನುದಾನಕ್ಕಾಗಿ ಒತ್ತಾಯಿಸಿದರು. ಶಾಸಕರ ಪರವಾಗಿ ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ, ಅನುದಾನ ನೀಡುವ ಭರವಸೆಯನ್ನು ಸಿಎಂ ಸದನದಲ್ಲೇ ನೀಡಬೇಕು, ಇವತ್ತು ಬಿಟ್ಟರೆ ಅವರು ನಮ್ಮ ಕೈಗೆ ಪುನಃ ಯಾವಾಗ ಸಿಗುತ್ತಾರೋ ಗೊತ್ತಿಲ್ಲ, ಹಾಗಾಗಿ ಇವತ್ತೇ ಘೋಷಣೆ ಮಾಡಬೇಕು ಎಂದರು. ವಿಪಕ್ಷ ಶಾಸಕರ ಸಭೆ ಕರೆದು ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರೂ ಕೇಳದ ವಿರೋಧ ಪಕ್ಷದ ಶಾಸಕರು ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತಾ ಸದನದ ಬಾವುಗಿಳಿದರು.
ಇದನ್ನೂ ಓದಿ: Karnataka Assembly Session: ಮಾತಿಗೆ ಸ್ಪೀಕರ್ ಅಡ್ಡಿಪಡಿಸಿದಾಗ ತಾಳ್ಮೆ ಕಳೆದುಕೊಂಡ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

