Karnataka Assembly Session; ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸ್ವಂತ ಬಲದಲ್ಲಿ ಒಮ್ಮೆಯೂ ಇಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರದ ದುರಾಡಳಿದಿಂದ ಬೇಸತ್ತಿರುವ ಜನ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ತರಲಿದ್ದಾರೆ, ನೀವು ಬೇಕಾದರೆ ಬರೆದಿಟ್ಟುಕೊಳ್ಳಿ, 2028ರಲ್ಲಿ ಬಿಜೆಪಿ 175 ಸ್ಥಾನಗಳನ್ನು ಗೆಲ್ಲಲಿದೆ ಎಂದ ಅಶೋಕ, ರಾಜಣ್ಣ ಅವರು ನವೆಂಬರ್ ಕ್ರಾಂತಿ ಅನ್ನುತ್ತಿದ್ದರು, ನಾವೆಲ್ಲ ಆ ಕ್ರಾಂತಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ ಅಂತ ಹೇಳಿದರು.
ಬೆಂಗಳೂರು, ಆಗಸ್ಟ್ 22: ವಿಧಾನಸಭಾ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ನಡುವೆ ಪದೇಪದೆ ವಾಗ್ವಾದಗಳು ನಡೆದವು-ಕೆಲವು ಗಂಭೀರ ಸ್ವರೂಪದವಾಗಿದ್ದರೆ ಕೆಲವು ಫ್ರೆಂಡ್ಲೀಯಾಗಿದ್ದವು. ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ, ಆಪರೇಶನ್ ಕಮಲ ನಡೆಸಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 2006 ರಿಂದ ಇಲ್ಲಿಯವರಗೆ ಬಿಜೆಪಿ 11 ವರ್ಷಗಳ ಕಾಲ ಆಡಳಿತ ನಡೆಸಿದೆ ಅದರೆ ಪ್ರತಿಬಾರಿ ಬೇರೆ ಪಕ್ಷದ ನೆರವು ಪಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮೊನ್ನೆ ನಡೆದ ಮೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಂದನ್ನೂ ಗೆಲ್ಲಲಾಗಲಿಲ್ಲ, ನಮ್ಮಲ್ಲಿ ಈಗ 141 ಸೀಟುಗಳಿವೆ, ನಿಮ್ಮಲ್ಲಿ ಮೂರು ಕಡಿಮೆಯಾಗಿವೆ, ಹಾಗಾಗಿ ನಮ್ಮ ಸರ್ಕಾರ ಉರುಳಿಸುವ ಕನಸು ಕಾಣೋದನ್ನು ಬಿಟ್ಟುಬಿಡಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ 24 ಕೊಲೆ ಮಾಡಿದ ಆರೋಪ, ಎಸ್ಐಟಿ ರಚಿಸ್ತೀರಾ: ಸರ್ಕಾರಕ್ಕೆ ಅಶೋಕ್ ಪ್ರಶ್ನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

