Karnataka Assembly Session: ಸಿದ್ದರಾಮಯ್ಯ ತಮ್ಮ ತಂದೆಗೆ ಬೇರೆಯವರು ಫೇಲಾಗಿದ್ದು ಹೇಳಿದರೇ ಹೊರತು ತಾವು ಫೇಲಾಗಿದ್ದು ಹೇಳಲಿಲ್ಲ! ಅಶೋಕ
ನಿನ್ನೆ ಗೃಹ ಸಚಿವ ಪರಮೇಶ್ವರ್ ಹೇಳದಿರುವುದನ್ನು ತಾನು ಹೇಳುವುದಾಗಿ ತಿಳಿಸಿದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಾರ್ಯಕ್ರಮ ನಡೆಸುವ ಪರವಾನಗಿ ಇರಲಿಲ್ಲ ಅಂತಷ್ಟೇ ಹೇಳಿದರು. ಒಂದು ಪಕ್ಷ ಕೆಎಸ್ಸಿಎಯವರಿಗೆ ಅನುಮತಿ ಇರಲಿಲ್ಲ ಅಂತಾದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು? ನಮಗೆ ಇದಕ್ಕೆ ಸ್ಪಷ್ಟನೆ ಬೇಕು ಅಂತ ಅಶೋಕ ಒತ್ತಾಯಿಸಿದರು.
ಬೆಂಗಳೂರು, ಆಗಸ್ಟ್ 22: ಸದನದಲ್ಲಿ ಇಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ (CM Siddaramaiah) ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ ಅನ್ನೋದನ್ನ ರಸವತ್ತಾಗಿ ಬಣ್ಣಿಸುತ್ತಾ ಸಿಎಂ ಕಾಲೆಳೆದರು. ತಮ್ಮ ಪರೀಕ್ಷೆಯ ಫಲಿತಾಂಶವನ್ನು ತಂದೆಗೆ ತಿಳಿಸುವಾಗ ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು, ಭೀಮ ಫೇಲ್, ಸೋಮ ಫೇಲು ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ! ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಉತ್ತರಗಳನ್ನು ಸಿಎಂ ಹಾಗೆಯೇ ನೀಡಿದರು. ಜಗತ್ತು ಸುತ್ತಿಸಿದರಾದರೂ ವಿಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಮಾತ್ರ ಕೊಡಲಿಲ್ಲ ಎಂದು ಆಶೋಕ ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಸದನದಲ್ಲಿ ಅಶೋಕ್ ಪ್ರಶ್ನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

