ಪ್ಯಾರಾಲಿಂಪಿಕ್ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

|

Updated on: Aug 19, 2024 | 9:17 PM

Tokyo Paralympics: ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಇದೀಗ ಪ್ಯಾರಾಲಿಂಪಿಕ್ ಸರದಿಯಾಗಿದ್ದು, ಅದೇ ಪ್ಯಾರಿಸ್​ನಲ್ಲಿ ಆಗಸ್ಟ್ 28 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತದಿಂದಲೂ ಪ್ಯಾರಾಲಿಂಪಿಕ್ ಅಥ್ಲೀಟ್​ಗಳು ಭಾಗವಹಿಸುತ್ತಿದ್ದು, ಈ ಕ್ರೀಡಾಪಟುಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು.

ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಇದೀಗ ಪ್ಯಾರಾಲಿಂಪಿಕ್ ಸರದಿಯಾಗಿದ್ದು, ಅದೇ ಪ್ಯಾರಿಸ್​ನಲ್ಲಿ ಆಗಸ್ಟ್ 28 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತದಿಂದಲೂ ಪ್ಯಾರಾಲಿಂಪಿಕ್ ಅಥ್ಲೀಟ್​ಗಳು ಭಾಗವಹಿಸುತ್ತಿದ್ದು, ಈ ಕ್ರೀಡಾಪಟುಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. ವಾಸ್ತವವಾಗಿ ಕಳೆದ ಪ್ಯಾರಾಲಿಂಪಿಕ್ಸ್ ಭಾರತಕ್ಕೆ ಬಹಳ ವಿಶೇಷವಾಗಿತ್ತು. ಏಕೆಂದರೆ ಭಾರತದ ಪ್ಯಾರಾಲಿಂಪಿಯನ್‌ಗಳು ಆ ಆವೃತ್ತಿಯಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗಿನ ದೇಶದ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಕಾರಣದಿಂದಾಗಿ ಭಾರತವು ಪದಕ ಪಟ್ಟಿಯಲ್ಲಿ 24 ನೇ ಸ್ಥಾನ ಪಡೆದಿತ್ತು.

ಇದೀಗ ಪ್ಯಾರಾಲಿಂಪಿಕ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಅಥ್ಲೀಟ್​ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಪ್ಯಾರಾ ಶೂಟರ್ ಅವನಿ ಲೆಖರಾ ಅವರೊಂದಿಗೆ ಮಾತನಾಡಿದರು. ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ 1 ಚಿನ್ನ ಸೇರಿದಂತೆ 2 ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದೀರಿ. ಈ ಬಾರಿ ನಿಮ್ಮ ಗುರಿ ಏನು? ಎಂದು ಪ್ರಧಾನಿ ಮೋದಿ, ಲೆಖರಾ ಬಳಿ ಕೇಳಿದರು. ಅದಕ್ಕೆ ಉತ್ತರಿಸಿದ ಅವನಿ ಲೆಖರಾ, ‘ಕಳೆದ ಬಾರಿ ಅದು ನನ್ನ ಮೊದಲ ಪ್ಯಾರಾಲಿಂಪಿಕ್ ಕ್ರೀಡಾಕೂಟವಾಗಿತ್ತು. ಹಾಗಾಗಿ 4 ಈವೆಂಟ್​​ಗಳಲ್ಲಿ ಭಾಗವಹಿಸಿ ಅನುಭವ ಪಡೆದಿದ್ದೆ. ಈ ಪ್ಯಾರಾಲಿಂಪಿಕ್ಸ್‌ನಲ್ಲಿ ನಾನು ಕ್ರೀಡೆಯಲ್ಲಿ ಪ್ರಬುದ್ಧತೆಯನ್ನು ಗಳಿಸಿದ್ದೇನೆ. ನಾನು ಭಾಗವಹಿಸುವ ಯಾವುದೇ ಸ್ಪರ್ಧೆಗಳಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನನಗೆ ಇಡೀ ಭಾರತದ ಬೆಂಬಲ ಮತ್ತು ಪ್ರೀತಿ ಸಿಕ್ಕಿದೆ ಎಂದರು.