ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ
ಗುಜರಾತಿನ ಏಕತಾ ನಗರದಲ್ಲಿ 1,220 ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಪ್ರಧಾನಿ ಮೋದಿ ಇಂದು ಸಂಜೆ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿದರು. ಇಂದು ಸಂಜೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಏಕತಾ ನಗರದಲ್ಲಿ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು.
ಏಕತಾನಗರ, ಅಕ್ಟೋಬರ್ 30: ಪ್ರಧಾನಿ ಮೋದಿ (PM Modi) ಎರಡು ದಿನಗಳ ಭೇಟಿಗೆ ಗುಜರಾತ್ ರಾಜ್ಯದಲ್ಲಿದ್ದಾರೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ವಡೋದರಾ ವಿಮಾನ ನಿಲ್ದಾಣ ತಲುಪಿದ ನಂತರ, ಪ್ರಧಾನಿ ಮೋದಿ ರಸ್ತೆ ಮೂಲಕ ಕೆವಾಡಿಯಾ ತಲುಪಿದರು. ಇಲ್ಲಿ, ಪ್ರಧಾನಿ ಮೋದಿ ಏಕತಾ ನಗರ ಮತ್ತು ರಾಜ್‌ಪಿಪ್ಲಾದಲ್ಲಿ 1,220 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ಮಾಡಿದರು. ಇಂದು ಸಂಜೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಏಕತಾ ನಗರದಲ್ಲಿ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ವಡೋದರಾದಿಂದ ರಸ್ತೆ ಮೂಲಕ ಕೆವಾಡಿಯಾ ತಲುಪಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

