ಬಿಹಾರದಲ್ಲಿ 36,000 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Updated on: Sep 15, 2025 | 5:29 PM

ಬಿಹಾರದ ಪೂರ್ಣಿಯಾದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುವ ಮತ್ತು ಸ್ಥಳೀಯ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು ಮತ್ತು ಉದ್ಘಾಟಿಸಿದರು. ಈ ಉಪಕ್ರಮಗಳು ಪ್ರದೇಶದ ಬೆಳವಣಿಗೆ ಮತ್ತು ಆಧುನೀಕರಣದತ್ತ ಮಹತ್ವದ ಹೆಜ್ಜೆಗೆ ಕಾರಣವಾಗಲಿವೆ. ಈ ಯೋಜನೆಯು ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಮಾಡುವ ಮೂಲಕ ಈಶಾನ್ಯ ಬಿಹಾರದಲ್ಲಿ ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ.

ಪಾಟ್ನಾ, ಸೆಪ್ಟೆಂಬರ್ 15: ಬಿಹಾರದಲ್ಲಿ ಇಂದು ಸಂಜೆ 36,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟನೆ ನೆರವೇರಿಸಿದರು. ಇವು ವಿದ್ಯುತ್, ರೈಲ್ವೆ, ವಿಮಾನ ನಿಲ್ದಾಣಗಳು, ವಸತಿ, ನೀರು, ಗ್ರಾಮೀಣಾಭಿವೃದ್ಧಿ, ಕೃಷಿ, ಪಶುಸಂಗೋಪನೆ ಮತ್ತು ಹೊಸ ಮಖಾನಾ ಮಂಡಳಿಯನ್ನು ಒಳಗೊಂಡಿವೆ. ಇದರಲ್ಲಿ 2,680 ಕೋಟಿಗೂ ಹೆಚ್ಚು ಮೌಲ್ಯದ ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ನದಿ ಸಂಪರ್ಕ ಯೋಜನೆಯ ಹಂತ 1 ಕೂಡ ಸೇರಿದೆ. ಈ ಯೋಜನೆಯು ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಮಾಡುವ ಮೂಲಕ ಈಶಾನ್ಯ ಬಿಹಾರದಲ್ಲಿ ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 15, 2025 05:28 PM