AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಕ್ಯುಲರಿಸಂ  ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ: ಬಾನು ಮುಸ್ತಾಕ್ ವಿರುದ್ಧದ PIL ವಜಾಕ್ಕೆ ಸಿಂಹ ಅಸಮಾಧಾನ

ಸೆಕ್ಯುಲರಿಸಂ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ: ಬಾನು ಮುಸ್ತಾಕ್ ವಿರುದ್ಧದ PIL ವಜಾಕ್ಕೆ ಸಿಂಹ ಅಸಮಾಧಾನ

ರಮೇಶ್ ಬಿ. ಜವಳಗೇರಾ
|

Updated on:Sep 15, 2025 | 6:35 PM

Share

ದಸರಾ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಐಎಲ್​ ಅನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಹಾಗೂ ಇತರರಿಗೆ ಹಿನ್ನಡೆಯಾದಂತಾಗಿದೆ. ಇನ್ನು ಕೋರ್ಟ್​ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 15): ದಸರಾ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಸಲ್ಲಿಸಿದ್ದ ಪಿಐಎಲ್​ ಅನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಹಾಗೂ ಇತರರಿಗೆ ಹಿನ್ನಡೆಯಾದಂತಾಗಿದೆ. ಇನ್ನು ಕೋರ್ಟ್​ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಹಿಂದೂ ವಿಚಾರದಲ್ಲಿ ನ್ಯಾಯ ಸಿಗಬಹದೂ ಎಂದು ನಾನು ಕೋರ್ಟ್ ಗೆ ಹೋಗಿದ್ದೆ. ಆದ್ರೆ, ಸೆಕ್ಯುಲರ್ ಹೆಸರಿನಲ್ಲಿ ಸಣ್ಣ ಪರದೆಯೊಳಗೆ ನನ್ನ ಅರ್ಜಿ ವಜಾ ಮಾಡಿದ್ದಾರೆ. ಉಚ್ಚ ನ್ಯಾಯಾಲಯದ ಬಗ್ಗೆ ಏನನ್ನು ಹೇಳಲ್ಲ. 2023ರ ಜನಸಾಹಿತ್ಯದ ಸಮ್ಮೇಳನದಲ್ಲಿ ಭುವನೇಶ್ವರಿ, ಅರಿಶಿನ ಕುಂಕುಮದ ಬಗ್ಗೆ ತಗಾದೆ ಎತ್ತಿರುವುದನ್ನು ತೋರಿಸಿದ್ವಿ. ಆದರೂ ಸೆಕ್ಯಲರಿಸಮ್ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ. ಅಭಿಪ್ರಾಯ ಬೇಧ ವ್ಯಕ್ತಪಡಿಸುವ ಹೆಸರಿನಲ್ಲಿ ಅರ್ಜಿ ವಜಾ ಮಾಡಿದ್ದಾರೆ ಎಂದು ಹೇಳಿದರು.

ದಲಿತ ವ್ಯಕ್ತಿಗೆ ಸೇರಿದ ಭೂಮಿಯನ್ನು ಸಿಎಂ ಪತ್ನಿಯ ಸಹೋದರ ಸ್ವಾಧೀನ ಮಾಡಿದ್ರು. ಮೂಡದಲ್ಲಿ ಅರ್ಜಿ ಹಾಕಿ ಬದಲಿ ನಿವೇಷನವನ್ನು ಬೆಲೆ ಬಾಳುವ ಪ್ರದೇಶದಲ್ಲಿ ಪಡೆದಿದ್ದರು. ಪಾಲಿಕೆಗೆ ಸುಳ್ಳು ಹೇಳಿ 14 ಸೈಟು ಹೊಡೆದಿದ್ದು ದಾಖಲೆ ಸಮೇತ ಇತ್ತು. ಆದರೂ 14 ಸೈಟುಗಳ ದರೋಡೆ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿತ್ತು. ಧರ್ಮಸ್ಥಳ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಸಮೀರ್ ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಕೊಡುತ್ತೆ. ಮಹೇಶ್ ತಿಮ್ಮರೋಡಿ ವಿರುದ್ಧ ಪ್ರಕರಣ ದಾಖಲಾಗಲ್ಲ . ರಾಷ್ಟ್ರೀಯ ಲಾಂಚನವನ್ನು ಕುಟ್ಟಿ ತೆಗೆಯುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತೀರಾ? ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್ ಅವರನ್ನು ಮುಸ್ಲಿಂ ಎನ್ನುವ ಕಾರಣಕ್ಕೆ ವಿರೋಧಿಸಲಿಲ್ಲ. ಭುವನೇಶ್ವರಿಗೆ ಬಗ್ಗೆ ಅಪಸ್ವರ ಇದ್ದ ಕಾರಣಕ್ಕೆ ವಿರೋಧಿಸಿದ್ದು. ಅದೇ ಕಾರಣಕ್ಕೆ ನಾನು ಕೋರ್ಟ್​​ ಗೆ ಹೋಗಿದ್ದು . ಸೆಕ್ಯಲರಿಂ ಚೌಕಟ್ಟಿನಲ್ಲಿ ತಂದು ಕೋರ್ಟ್ ಅರ್ಜಿ ವಜಾ ಮಾಡಿದೆ. ಸಂವಿಧಾನದ ಪುಸ್ತಕದಲ್ಲೂ ಪುರಾಣ ಕಥೆಗಳು ಇವೆ. ಅದನ್ನು ಮುಂದೆ ಪ್ರಶ್ನೆ ಮಾಡಿದಾಗ ಏನ್ ಹೇಳುತ್ತೀರಿ. ನ್ಯಾಯಾಂಗದ ವಿಶ್ವಾಸರ್ಹತೆ ಪ್ರಶ್ನೆ ಮಾಡುತ್ತಿಲ್ಲ. ನಾನು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೇ ಮಾತನಾಡುತ್ತಿದ್ದೇನೆ ಎಂದರು.

Published on: Sep 15, 2025 06:34 PM