Modi in Poland: ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ; ಮೋದಿಗೆ ರಾಖಿ ಕಟ್ಟಿದ ಅನಿವಾಸಿಗಳು

ಪ್ರಧಾನಿ ನರೇಂದ್ರ ಮೋದಿ ಅವರ ಪೋಲೆಂಡ್ ಭೇಟಿ ಭಾರತದಲ್ಲಿ ಮಾತ್ರವಲ್ಲದೆ ಪೋಲೆಂಡ್​ನಲ್ಲಿಯೂ ಸಾಕಷ್ಟು ನಿರೀಕ್ಷೆ, ಸಂಭ್ರಮ ಮೂಡಿಸಿದೆ. ಪೋಲೆಂಡ್​ನಲ್ಲಿರುವ ಅನಿವಾಸಿ ಭಾರತೀಯರು ಮೋದಿಯವರನ್ನು ನೋಡಲು ಇಂದು ಮಧ್ಯಾಹ್ನದಿಂದಲೇ ವಾರ್ಸಾದ ಹೋಟೆಲ್ ಬಳಿ ಜಮಾಯಿಸಿದ್ದರು. ಅವರೆಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು.

Modi in Poland: ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ; ಮೋದಿಗೆ ರಾಖಿ ಕಟ್ಟಿದ ಅನಿವಾಸಿಗಳು
|

Updated on: Aug 21, 2024 | 7:47 PM

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಪೋಲೆಂಡ್​ಗೆ ತಲುಪಿದ್ದಾರೆ. ಅಲ್ಲಿ ಅವರಿಗೆ ಗುಜರಾತಿ ನೃತ್ಯದ ಮೂಲಕ ಪೋಲೆಂಡ್​ನ ಕಲಾವಿದರು ಸ್ವಾಗತ ಕೋರಿದ್ದಾರೆ. ಬಳಿಕ ಪೋಲೆಂಡ್​ನಲ್ಲಿರುವ ಅನಿವಾಸಿ ಭಾರತೀಯರು ಮೋದಿಯವರನ್ನು ನೋಡುತ್ತಿದ್ದಂತೆ ‘ಭಾರತ್ ಮಾತಾ ಕಿ ಜೈ’, ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ವೇಳೆ ನರೇಂದ್ರ ಮೋದಿ ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದವರಿಗೆ ಆಟೋಗ್ರಾಫ್ ಹಾಕಿ, ಫೋಟೋಗೆ ಪೋಸ್ ಕೊಟ್ಟರು. ಕೆಲವರು ಮಹಿಳೆಯರು ಮೋದಿಯವರ ಕೈಗೆ ರಾಖಿಯನ್ನೂ ಕಟ್ಟಿದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us