ಪ್ರಧಾನಿ ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!

Edited By:

Updated on: Aug 30, 2026 | 11:19 PM

ಬೆಂಗಳೂರಿನಲ್ಲಿ ಫುಟ್​​​ಪಾತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದ್ದು, ಇದೀಗ ನಿಂಗಮ್ಮನಿಗೆ ಆತಂಕ ಶುರುವಾಗಿದೆ. ಜಿಬಿಎ ಅಧಿಕಾರಿಗಳು ಹೋಟೆಲ್ ತೆರವು ಮಾಡಿ ಎನ್ನುತ್ತಿದ್ದಾರೆ. ಇದರಿಂದ ಮೋದಿ ಮೆಚ್ಚಿದ ನಿಂಗಮ್ಮನಿಗೆ ಒತ್ತುವರಿ ತೆರವು ಭಯ ಶುರುವಾಗಿದೆ. ಯಾಕಂದ್ರೆ, ಕೇಂದ್ರದ ಯೋಜನೆಯ ಹಣ ಸಹಾಯದಿಂದ ಸ್ವಾವಲಂಬಿಯಾಗಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ಇದೀಗ ತೆರವು ಮಾಡಿದರೆ ಮುಂದಿನ ಜೀವನ ಹೇಗೆ ಎನ್ನುವ ಅಳಲು ನಿಂಗಮ್ಮನವರದ್ದಾಗಿದೆ.

ಬೆಂಗಳೂರು, (ಆಗಸ್ಟ್ 30): 137 ನೇ ಮನ್ ಕಿ ಬಾತ್ ನಲ್ಲಿ (mann ki baat) ಬೆಂಗಳೂರಿನ ನಿಂಗಮ್ಮ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು..ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಬಲ ನೀಡುವ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ಬೆಂಗಳೂರಿನ ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಜತೆಗೆ ತಾನು ದುಡಿದಿರುವ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ. ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇಕಡಾ 46 ರಷ್ಟು ಮಹಿಳೆಯರಿದ್ದು, ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಸಾಕ್ಷಿ ಎಂದು ಪ್ರಧಾನಿ ಮೋದಿ, ಬೆಂಗಳೂರಿನ ನಿಂಗಮ್ಮನವರ ಸ್ವಾವಲಂಬಿ ಬದುಕನ್ನು ಉದಾಹರಣೆಯಾಗಿ ನೀಡಿದ್ದಾರೆ. ಆದ್ರೆ. ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬೆಳಗ್ಗೆಯಿಂದ ಸಂಜೆಯವರೆಗೂ ಹೋಟೆಲ್ ನಡೆಸುವ ನಿಂಗಮ್ಮನಿಗೆ ಒತ್ತುವರಿ ತೆರವು ಆತಂಕ ಎದುರಾಗಿದೆ.

ಮೋದಿ ಮೆಚ್ಚಿದ ನಿಂಗಮ್ಮನಿಗೆ ಒತ್ತುವರಿ ತೆರವು ಭಯ

ಬೆಂಗಳೂರಿನಲ್ಲಿ ಫುಟ್​​​ಪಾತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದ್ದು, ಇದೀಗ ನಿಂಗಮ್ಮನಿಗೆ ಆತಂಕ ಶುರುವಾಗಿದೆ. ಜಿಬಿಎ ಅಧಿಕಾರಿಗಳು ಹೋಟೆಲ್ ತೆರವು ಮಾಡಿ ಎನ್ನುತ್ತಿದ್ದಾರೆ. ಇದರಿಂದ ಮೋದಿ ಮೆಚ್ಚಿದ ನಿಂಗಮ್ಮನಿಗೆ ಒತ್ತುವರಿ ತೆರವು ಭಯ ಶುರುವಾಗಿದೆ. ಯಾಕಂದ್ರೆ, ಕೇಂದ್ರದ ಯೋಜನೆಯ ಹಣ ಸಹಾಯದಿಂದ ಸ್ವಾವಲಂಬಿಯಾಗಿ ಪುಟ್ಟ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ಇದೀಗ ತೆರವು ಮಾಡಿದರೆ ಮುಂದಿನ ಜೀವನ ಹೇಗೆ ಎನ್ನುವ ಅಳಲು ನಿಂಗಮ್ಮನವರದ್ದಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಮನ್​​ ಕೀ ಬಾತ್​​​ನಲ್ಲಿ ಮೆಚ್ಚುಗೆ ಪಡೆದ ಬೆಂಗಳೂರಿನ ನಿಂಗಮ್ಮ ಯಾರು?

Published on: Aug 30, 2026 07:47 PM
Loading...
Unable to load recommendations.
Follow Us
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More