ರಾಜಕೀಯ, ಅಧಿಕಾರದಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ ಸೇವೆ ಎಂಬುದು ಪರಮ ಧರ್ಮವಾಗಿರಬೇಕು: ಸೇವಾ ಯಾತ್ರೆಯ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ

Updated on: Sep 24, 2026 | 9:49 AM

'ಸೇವಾ ಯಾತ್ರೆ'ಯ ಅಂಗವಾಗಿ ದೇಶಾದ್ಯಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಸಂವಾದ ನಡೆಸಿದರು. ಕೇವಲ ಬಾಯಿಮಾತಿನಲ್ಲಿ ಉಪದೇಶ ಮಾಡುವ ಬದಲು, ನಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿ ಮತ್ತು ನಡವಳಿಕೆಯಲ್ಲಿ ಸೇವೆಯನ್ನು ತೋರಿಸಿಕೊಡಬೇಕು ಎಂದು ಪ್ರಧಾನಿ ಕಾರ್ಯಕರ್ತರಿಗೆ ಕರೆ ನೀಡಿದರು.

ವಡ್ನಗರ, ಸೆಪ್ಟೆಂಬರ್ 24:’ಸೇವಾ ಯಾತ್ರೆ’ಯ ಅಂಗವಾಗಿ ದೇಶಾದ್ಯಂತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಸಂವಾದ ನಡೆಸಿದರು. ಕೇವಲ ಬಾಯಿಮಾತಿನಲ್ಲಿ ಉಪದೇಶ ಮಾಡುವ ಬದಲು, ನಮ್ಮ ನಿತ್ಯದ ಕೆಲಸ-ಕಾರ್ಯಗಳಲ್ಲಿ ಮತ್ತು ನಡವಳಿಕೆಯಲ್ಲಿ ಸೇವೆಯನ್ನು ತೋರಿಸಿಕೊಡಬೇಕು ಎಂದು ಪ್ರಧಾನಿ ಕಾರ್ಯಕರ್ತರಿಗೆ ಕರೆ ನೀಡಿದರು.

ಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬ ಕಾರ್ಯಕರ್ತರು ಮೊದಲು ತಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಆರಂಭದಲ್ಲೇ ಪ್ರೀತಿಯ ಸಲಹೆ ನೀಡಿದರು. “ಸೇವೆ ಮಾಡುವುದೇ ನಮ್ಮ ಪ್ರಮುಖ ಧ್ಯೇಯವಾಗಬೇಕು. ಸಾರ್ವಜನಿಕರಿಗೆ ಸೇವೆಯ ಮಹತ್ವವನ್ನು ಬರೀ ಭಾಷಣ ಅಥವಾ ಬೋಧನೆಗಳ ಮೂಲಕ ತಿಳಿಸುವುದಲ್ಲ, ಬದಲಾಗಿ ನಮ್ಮ ನಿಸ್ವಾರ್ಥ ನಡವಳಿಕೆ ಮತ್ತು ಕೃತಿಯ ಮೂಲಕವೇ ಸಮಾಜಕ್ಕೆ ತೋರಿಸಿಕೊಡಬೇಕು” ಎಂದು ಮೋದಿ ಒತ್ತಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ನಾವು ಎಷ್ಟೇ ಉನ್ನತ ರಾಜಕೀಯ ಅಧಿಕಾರ ಪಡೆದರೂ, ಎಷ್ಟೇ ದೊಡ್ಡ ಸ್ಥಾನ-ಮಾನ ತಲುಪಿದರೂ ನಮ್ಮ ಮೂಲ ಹಾದಿ ಮಾತ್ರ ಜನರ ಸೇವೆಯಾಗಿರಬೇಕು. ಯಾವುದೇ ಕಾರಣಕ್ಕೂ ನಾವು ಆ ಮಾರ್ಗದಿಂದ ವಿಮುಖರಾಗುವುದಿಲ್ಲ ಎಂಬುದನ್ನು ನಮ್ಮ ನಡತೆ ಸಾರಬೇಕು” ಎಂದು ತಿಳಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More