Loading video

ಕುಟುಂಬವಾದದ ವಿರುದ್ಧ ಪ್ರಧಾನಿ ಮೋದಿಯವರ ಹೇಳಿಕೆಯೇ ನನ್ನ ಹೋರಾಟದ ಆಧಾರ: ಬಸನಗೌಡ ಯತ್ನಾಳ್

|

Updated on: Mar 14, 2025 | 11:58 AM

ಪಕ್ಷವನ್ನು ದುರ್ಬಲಗೊಳಿಸುವ ಕೆಲಸಕ್ಕೆ ತಾನ್ಯಾವತ್ತೂ ಮುಂದಾಗಲ್ಲ, ಬಿಜೆಪಿಯನ್ನು ಬಲಪಡಿಸುವುದು ತಮ್ಮ ಗುರಿಯಾಗಿದೆ, ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ದೊಡ್ಡ ಆಸ್ತಿ, ಬಿಜೆಪಿಯನ್ನು ಜಾತಿ ಹೆಸರಲ್ಲಿ ಬ್ಲ್ಯಾಕ್ ಮೇಲ್ ಕೂಡ ತಾನು ಮಾಡಲ್ಲ ಅದನ್ನು ಕಟ್ಟಿ ಬೆಳೆಸಬೇಕೆನ್ನುವುದೇ ತನ್ನೆಲ್ಲ ಹೋರಾಟಗಳ ಹಿಂದಿನ ಉದ್ದೇಶ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು, 14 ಮಾರ್ಚ್: ಬಿಜೆಪಿ ವರಿಷ್ಠರು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತುಕ್ರಮವೇನಾದರೂ ಜರುಗಿಸಿದರೆ ಅಥವಾ ಪಕ್ಷದಿಂದ ಉಚ್ಛಾಟಿಸಿದರೆ ಅವರು ಹೊಸ ಪಕ್ಷ ಹಿಂದೂ ಪಕ್ಷ ಕಟ್ಟುತ್ತಾರೆಯೇ? ಖಂಡಿತ ಇಲ್ಲವೆನ್ನುತ್ತಾರೆ ರೆಬೆಲ್ ಶಾಸಕ ಯತ್ನಾಳ್. ತನ್ನ ಮತ್ತು ತನ್ನಂತೆ ಯೋಚಿಸುವವರ ತಗಾದೆ ಒಂದು ಕುಟುಂಬದ ವಿರುದ್ಧ ಮಾತ್ರ, ಆ ಕುಟುಂಬದ ಸದಸ್ಯರೇ ಪಕ್ಷದ ರಾಜ್ಯಾಧ್ಯಕ್ಷರಾಗೋದದು ತಮಗೆ ಬೇಕಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ವಂಶವಾದವನ್ನು ದ್ವೇಷಿಸುತ್ತಾರೆ, ತಮ್ಮ ಹೋರಾಟಕ್ಕೆ ಅವರ ಹೇಳಿಕೆಗಳೇ ಆಧಾರ ಎಂದು ಯತ್ನಾಳ್ ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಸನಗೌಡ ಯತ್ನಾಳ್​ರನ್ನು ಮನಬಂದಂತೆ ಬಯ್ಯುತ್ತಿದ್ದ ರೇಣುಕಾಚಾರ್ಯ ವಿಜಯಪುರ ಶಾಸಕ ತಮ್ಮ ನಾಯಕನೆಂದರು!