PM Modi in Chitradurga Live: ಚಿತ್ರದುರ್ಗದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

| Updated By: Digi Tech Desk

Updated on: May 02, 2023 | 12:03 PM

ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯವನ್ನು ರಾಷ್ಟ್ರದ ನಂಬರ್ ವನ್ ರಾಜ್ಯ ಮಾಡಲು ಸಹಕರಿಸಬೇಕೆಂದು ಮೋದಿ ಜನರನ್ನು ಆಗ್ರಹಿಸಿದರು.

ಚಿತ್ರದುರ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿಯ ಬೃಹತ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ. ಎಂದಿನಂತೆ ಅವರು ಕನ್ನಡದಲ್ಲೇ (Kannada) ಭಾಷಣವನ್ನು ಆರಂಭಿಸಿ ನೆರೆದ ಜನ ಸಂತೋಷದದಿಂದ ಕೇಕೆ ಹಾಕುವಂತೆ ಮಾಡಿದರು. ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಮದಕರಿ ನಾಯಕ, ವೀರ ವನಿತೆ ಓಬವ್ವ (Obavva) ಅವರನ್ನು ನೆನೆದು ವಂದಿಸಿದರು. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯವನ್ನು ರಾಷ್ಟ್ರದ ನಂಬರ್ ವನ್ ರಾಜ್ಯ ಮಾಡಲು ಸಹಕರಿಸಬೇಕೆಂದು ಮೋದಿ ಜನರನ್ನು ಆಗ್ರಹಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 02, 2023 12:01 PM