ಕಾಶಿ ವಿಶ್ವನಾಥನ ನವ್ಯ ಮತ್ತು ಭವ್ಯ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನಃ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು
ಶುಕ್ರವಾರ ಪ್ರಧಾನಿ ಮೋದಿ ಅವರು ದೇವಸ್ಥಾನಕ್ಕೆ ಆಗಮಿಸಿದಾಗ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಆವರಣದಲ್ಲಿ ನೆರದಿದ್ದರು. ಅವರ ಕಾರಿನ ಸುತ್ತ ಆಂಗರಕ್ಷಕರ ದಂಡಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರದಂದು ತಮ್ಮ ಸ್ವಕ್ಷೇತ್ರ ವಾರಣಾಸಿಯ (Varanasi) ಕಾಶಿ ವಿಶ್ವನಾಥ ಮಂದಿರದಲ್ಲಿ (Kashi Vishwanath Temple) ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಆಗಮಿಸುವ ಮೊದಲು ಅವರು ಉತ್ತರ ಪ್ರದೇಶದ ವಿಧಾನ ಸಭೆಗೆ ಕೊನೆಯ ಹಂತದ ಚುನಾವಣೆಯ ಭಾಗವಾಗಿ ಒಂದು ರೋಡ್ ಶೋ ನಡೆಸಿದರು. ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು ಡಮರುಗ ಬಾರಿಸಿದರು. ಅದನ್ನು ಬಾರಿಸುವಾಗ ಅವರಲ್ಲಿದ್ದ ತನ್ಮಯತೆ ಮತ್ತು ಸಂತೋಷ ಮುಖದಲ್ಲಿ ವ್ಯಕ್ತವಾಗಿತ್ತು. ನಿಮಗೆ ಚೆನ್ನಾಗಿ ನೆನಪಿದೆ, ಇತ್ತೀಗಷ್ಟೇ ನಡೆದ ನವ್ಯ ಮತ್ತು ಭವ್ಯ ಕಾಶೀ ವಿಶ್ವನಾಥನ ದೇವಸ್ಥಾನದ ಲೋಕಾರ್ಪಣೆಯ ಸಂದರ್ಭದಲ್ಲೂ ಪ್ರಧಾನಿ ಮೋದಿ ಅವರು ಗಂಗೆಯಲ್ಲಿ ಮಿಂದು ವಿಶ್ವನಾಥನಿಗೆ ಜಲಾಭಿಷೇಕದ ಜೊತೆ ಹಲವಾರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು. ಶೋದಶೋಪಚಾರ ಪೂಜೆಯನ್ನೂ ಪ್ರಧಾನಿಗಳು ಶಿವನಿಗೆ ಸಲ್ಲಿಸಿದ್ದರು.
ಶುಕ್ರವಾರ ಪ್ರಧಾನಿ ಮೋದಿ ಅವರು ದೇವಸ್ಥಾನಕ್ಕೆ ಆಗಮಿಸಿದಾಗ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಆವರಣದಲ್ಲಿ ನೆರದಿದ್ದರು. ಅವರ ಕಾರಿನ ಸುತ್ತ ಆಂಗರಕ್ಷಕರ ದಂಡಿತ್ತು. ಅವರು ದೇವಸ್ಥಾನವನ್ನು ಸಮೀಪಿಸುತ್ತಿದ್ದಂತೆಯೇ ಜನರು ಮತ್ತು ಕಾರ್ಯಕರ್ತರು ಹರ ಹರ ಮಹಾದೇವ ಮತ್ತು ಮೋದೀ ಜೀ ಕೀ ಜೈ ಅಂತ ಜಯಘೋಷಗಳನ್ನು ಮಾಡಿದರು.
ಡಮರುಗಳ ಸದ್ದಿನೊಂದಿಗೆ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಈ ವಿಡಿಯೋನಲ್ಲಿ ಪ್ರಧಾನಿ ಮೋದಿ ಅವರು ಸಲ್ಲಿಸಿದ ವಿವಿಧ ಪೂಜೆಗಳನ್ನು ನೀವು ಕಾಣಬಹುದು.
ಉತ್ತರ ಪ್ರದೇಶದಲ್ಲಿ ಚುನಾವಣೆ ಕೊನೆ ಹಂತಕ್ಕೆ ಬರುತ್ತಿದ್ದಂತೆಯೇ ವಾರಣಾಸಿಗೆ ಪ್ರಮುಖ ನಾಯಕರ ದಂಡು ದೌಡಾಯಿಸುತ್ತಿದೆ. ಎಲ್ಲ ಪ್ರಮುಖ ಪಕ್ಷಗಳ ಪ್ರಮುಖ ನಾಯಕರು ವಾರಣಾಸಿಗೆ ಆಗಮಿಸಿದ್ದಾರೆ ಇಲ್ಲವೇ ಬರಲಿದ್ದಾರೆ. ಶುಕ್ರವಾರಂದೇ ಪುಣ್ಯಕ್ಷೇತ್ರ ವಾರಣಾಸಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಒಂದು ರೋಡ್ ಶೋ ನಡೆಸಿದರು.
ಪ್ರಧಾನಿ ಮೋದಿ ಅವರು ನಡೆಸಿದ ರೋಡ್ ಶೋ ಮೂರು ವಿಧಾನ ಸಭಾ ಕ್ಷೇತ್ರಗಳು-ಕಂಟೋನ್ಮೆಂಟ್, ಉತ್ತರ ವಾರಣಾಸಿ ಮತ್ತು ವಾರಣಾಸಿ ದಕ್ಷಿಣಗಳನ್ನು ಆವರಿಸಿತ್ತು. 7ನೇ ಹಂತದ ಮತದಾನದದೊಂದಿಗೆ ಮಾರ್ಚ್ 7 ರಂದು ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಸಂಪನ್ನಗೊಳ್ಳಲಿದೆ.
ಇದನ್ನೂ ಓದಿ: PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ