ರಾಮಮಂದಿರ ನಿರ್ಮಾಣಿಕರ ಮೇಲೆ ಪುಷ್ಪಾರ್ಚನೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Jan 22, 2024 | 7:28 PM

ಒಂದು ದೊಡ್ಡ ಬುಟ್ಟಿಯಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ತುಂಬಿಕೊಂಡ ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರ ಮೇಲೆ ಅವುಗಳನ್ನು ಚೆಲ್ಲಿ ತಮ್ಮ ಸಂತಸ, ಕೃತಜ್ಞತೆ ಸಲ್ಲಿಸುವುದರೊಂದಿಗೆ ಅಭಿನಂದಿಸುತ್ತಿದ್ದಾರೆ. ಕೆಲಸಗಾರರನ್ನು ಸಾಲಾಗಿ ಒಂದೆಡೆ ಕೂರಿಸಲಾಗಿದೆ ಮತ್ತು ಅವರು ಟಾಟಾ ಹಾಗೂ ಎಲ್ ಅಂಡ್ ಟಿ ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ.

ಅಯೋಧ್ಯೆ: ರಾಮ ಹುಟ್ಟಿದೂರು ಅಯೋಧ್ಯೆಯಲ್ಲೇ (Ayodhya) ರಾಮನ ಮಂದಿರವಿಲ್ಲದೆ (Ram temple) ಐದು ಶತಮಾನಗಳನ್ನು ಕಳೆದ ಭಾರತೀಯರಿಗೆ ಇವತ್ತಿನ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮ ಭಾಷಣದಲ್ಲಿ ಹೇಳಿದ ಒಂದು ಹೊಸ ಕಾಲಚಕ್ರವನ್ನು ಸೂಚಿಸುವ ದಿನ. ಎಲ್ಲರಲ್ಲಿ ಧನ್ಯತೆ ಮತ್ತು ಸಾರ್ಥಕತೆಯ ಭಾವ ಮನೆಮಾಡಿದೆ, ಜನ ಸಂಭ್ರಮಿಸುತ್ತಿದ್ದಾರೆ. ಇನ್ನು ಮಂದಿರವನ್ನು ಕಟ್ಟಿದ ಸಂತಸ ಹೇಗಿರಬೇಡ? ಕಟ್ಟಿದವರಲ್ಲಿ ಎಲ್ಲ ಧರ್ಮ, ಜಾತಿ ಮತ್ತು ವರ್ಗದ ಜನ ಸೇರಿದ್ದಾರೆ. ಅವರಲ್ಲಿನ ಸಂತಸ ಸಂಭ್ರಮ ಇಮ್ಮಡಿಗೊಂಡಿದ್ದು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರು ಮೇಲೆ ಪುಷ್ಪಾರ್ಚನೆ ಮಾಡಿ ಅಭಿನಂದಿಸಿದಾಗ! ದೃಶ್ಯಗಳಲ್ಲಿ ನೀವು ನೋಡಬಹುದು, ಒಂದು ದೊಡ್ಡ ಬುಟ್ಟಿಯಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ತುಂಬಿಕೊಂಡ ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರ ಮೇಲೆ ಅವುಗಳನ್ನು ಚೆಲ್ಲಿ ತಮ್ಮ ಸಂತಸ, ಕೃತಜ್ಞತೆ ಸಲ್ಲಿಸುವುದರೊಂದಿಗೆ ಅಭಿನಂದಿಸುತ್ತಿದ್ದಾರೆ. ಕೆಲಸಗಾರರನ್ನು ಸಾಲಾಗಿ ಒಂದೆಡೆ ಕೂರಿಸಲಾಗಿದೆ ಮತ್ತು ಅವರು ಟಾಟಾ ಹಾಗೂ ಎಲ್ ಅಂಡ್ ಟಿ ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ. ಒಂದು ಅತ್ಯುತ್ತಮ ಮತ್ತು ಅನಕರಣೀಯ ಜೆಸ್ಚರ್ ಪ್ರಧಾನಿ ಮೋದಿ ಪ್ರದರ್ಶಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 22, 2024 05:23 PM