ಗುವಾಹಟಿಯಲ್ಲಿ ಡೋಲು ಬಾರಿಸಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ
ಇಂದು 'ಜುಮೋಯಿರ್ ಬಿನಂದಿನಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸ್ಸಾಂನ ಗುವಾಹಟಿಯ ಸರುಸಜೈ ಕ್ರೀಡಾಂಗಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ಸ್ವಾಗತಿಸಿದರು. ಈ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಅವರೊಂದಿಗೆ ಇದ್ದರು. ಪಿಎಂ ಮೋದಿ ಅಸ್ಸಾಂ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಜುಮೋಯಿರ್ (ಜುಮೈರ್ ಎಂದೂ ಕರೆಯುತ್ತಾರೆ) ಎಂದು ಕರೆಯಲ್ಪಡುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಗುವಾಹಟಿ: ಅಸ್ಸಾಂನ ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆದ ‘ಜುಮೋಯಿರ್ ಬಿನಂದಿನಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಡ್ರಮ್ ಬಾರಿಸಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಅಸ್ಸಾಂನ ಚಹಾ ಪರಂಪರೆಯನ್ನು ಆಚರಿಸುವ ‘ಜುಮೋಯಿರ್ ಬಿನಂದಿನಿ 2025’ನಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಗುವಾಹಟಿಗೆ ಆಗಮಿಸಿದರು.ಗುವಾಹಟಿಯಲ್ಲಿ ಇಂದು ನಡೆಯಲಿರುವ ಇದುವರೆಗಿನ ಅತಿದೊಡ್ಡ ಜುಮೋಯಿರ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಅಸ್ಸಾಂನ ಇತಿಹಾಸದಲ್ಲೇ ಇದು ಅತಿ ದೊಡ್ಡ ನೃತ್ಯ ಕಾರ್ಯಕ್ರಮವಾಗಿದೆ. ಈ ಬಾರಿ ಅಸ್ಸಾಂನ ಚಹಾ ಉದ್ಯಮದ 200ನೇ ವಾರ್ಷಿಕೋತ್ಸವವನ್ನು ಆಚರಿಸಲು ಸುಮಾರು 8,600 ನೃತ್ಯಗಾರರು ಗುವಾಹಟಿಯ ಜುಮೋಯಿರ್ ಬಿನಾಂದಿನಿಯಲ್ಲಿರುವ ಸರುಸಜೈ ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ