ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಏಕತಾ ನಗರವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ನೂತನ ಸೌಲಭ್ಯಗಳು, ಪ್ರವಾಸಿಗರ ವಸತಿ ಗೃಹಗಳು, ಮೂಲಸೌಕರ್ಯ ನವೀಕರಣ ಹಾಗೂ ನರ್ಮದಾ ನದಿ ತೀರದ ಸೌಂದರ್ಯೀಕರಣ ಯೋಜನೆಗಳನ್ನು ಉದ್ಘಾಟಿಸಲಾಯಿತು. ಪರಿಸರ ಸಂರಕ್ಷಣೆಯ ಭಾಗವಾಗಿ ಪ್ರವಾಸಿಗರಿಗೆ ಇ-ಬಸ್ಸುಗಳು ಮತ್ತು ಪರಿಸರ ಸ್ನೇಹಿ ವಾಹನಗಳ ಸಂಚಾರ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಪ್ರವಾಸಿಗರ ಸುರಕ್ಷತೆಗಾಗಿ ಸುಧಾರಿತ ಕಂಟ್ರೋಲ್ ರೂಮ್, ಸಿಸಿಟಿವಿ ಕಾವಲು ವ್ಯವಸ್ಥೆ ಮತ್ತು ಹಸಿರು ಇಂಧನ ಯೋಜನೆಗಳನ್ನು ಹಸ್ತಾಂತರಿಸಲಾಯಿತು.
ಏಕತಾ ನಗರ, ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ರಾಷ್ಟ್ರೀಯ ಏಕತಾ ದಿನ‘ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ನರ್ಮದಾ ಜಿಲ್ಲೆಯ ಏಕ್ತಾ ನಗರದಲ್ಲಿ (ಕೆವಾಡಿಯಾ) 400 ಕೋಟಿಗೂ ಹೆಚ್ಚಿನ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾದ ‘ಸ್ಟ್ಯಾಚ್ಯೂ ಆಫ್ ಯೂನಿಟಿ’ ಸುತ್ತಮುತ್ತಲಿನ ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಪರಿಸರ ಸ್ನೇಹಿ ಯೋಜನೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.
ಏಕತಾ ನಗರವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ನೂತನ ಸೌಲಭ್ಯಗಳು, ಪ್ರವಾಸಿಗರ ವಸತಿ ಗೃಹಗಳು, ಮೂಲಸೌಕರ್ಯ ನವೀಕರಣ ಹಾಗೂ ನರ್ಮದಾ ನದಿ ತೀರದ ಸೌಂದರ್ಯೀಕರಣ ಯೋಜನೆಗಳನ್ನು ಉದ್ಘಾಟಿಸಲಾಯಿತು. ಪರಿಸರ ಸಂರಕ್ಷಣೆಯ ಭಾಗವಾಗಿ ಪ್ರವಾಸಿಗರಿಗೆ ಇ-ಬಸ್ಸುಗಳು ಮತ್ತು ಪರಿಸರ ಸ್ನೇಹಿ ವಾಹನಗಳ ಸಂಚಾರ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಪ್ರವಾಸಿಗರ ಸುರಕ್ಷತೆಗಾಗಿ ಸುಧಾರಿತ ಕಂಟ್ರೋಲ್ ರೂಮ್, ಸಿಸಿಟಿವಿ ಕಾವಲು ವ್ಯವಸ್ಥೆ ಮತ್ತು ಹಸಿರು ಇಂಧನ ಯೋಜನೆಗಳನ್ನು ಹಸ್ತಾಂತರಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ