ದೆಹಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ; ಶಿಕ್ಷಣ ಕ್ಷೇತ್ರಕ್ಕೆ ಆಪ್ ಸರ್ಕಾರದ ಕೊಡುಗೆ ವಿರುದ್ಧ ವಾಗ್ದಾಳಿ
ದೆಹಲಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ವೇಳೆ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮ್ ಆದ್ಮಿ ಸರ್ಕಾರ ಮಾಡಿದ ಅಪ್ರಮಾಣಿಕ ಪ್ರಯತ್ನಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಎಎಪಿ ಸರ್ಕಾರ 9ನೇ ತರಗತಿಯ ನಂತರ ಮಕ್ಕಳನ್ನು ಮುಂದೆ ಹೋಗಲು ಬಿಡುವುದಿಲ್ಲ. ಅವರು ಉತ್ತೀರ್ಣರಾಗುವುದು ಖಚಿತವಾದ ಮಕ್ಕಳಿಗೆ ಮಾತ್ರ ಮುಂದಿನ ತರಗತಿಗೆ ಹೋಗಲು ಅವಕಾಶ ನೀಡುತ್ತಾರೆ. ಅವರು ಒಂದುವೇಳೆ ಫೇಲ್ ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ನಾನು ಕೇಳಿದ್ದೇನೆ ಎಂದು ಮೋದಿ ಟೀಕಿಸಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಗಳಲ್ಲಿನ ಉತ್ತೀರ್ಣದ ಮಾನದಂಡಗಳ ಬಗ್ಗೆ ದೆಹಲಿಯ ಮಕ್ಕಳ ಜೊತೆ ಅವರು ಚರ್ಚಿಸಿದರು. ಈ ವೇಳೆ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಗಳ ಪರವಾಗಿ ಆಪ್ ಸರ್ಕಾರದ ಕೆಲಸವು ತುಂಬಾ ‘ಅಪ್ರಾಮಾಣಿಕ’ವಾಗಿದೆ. ಈ ಸರ್ಕಾರ ಯಾರು ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆಂಬ ಖಾತರಿ ಇರುತ್ತದೆಯೋ ಅಂತಹ ವಿದ್ಯಾರ್ಥಿಗಳನ್ನು ಮಾತ್ರ 9ನೇ ತರಗತಿಯ ನಂತರ ಶಿಕ್ಷಣವನ್ನು ಮುಂದುವರಿಸಲು ಬಿಡುತ್ತಿತ್ತು ಎಂದು ನಾನು ಕೇಳಿದ್ದೇನೆ. ಸರ್ಕಾರದ ಮೇಲೆ ಕೆಟ್ಟ ಹೆಸರು ಬರಬಾರದೆಂದು ಈ ರೀತಿ ಮಾಡಲಾಗುತ್ತಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಬಹಳ ಗಂಭೀರ ಪರಿಣಾಮ ಬೀರಿದೆ ಎಂದು ಮೋದಿ ಟೀಕಿಸಿದ್ದಾರೆ.
ಫೆಬ್ರವರಿ 5ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿ ಚುನಾವಣಾ ಪ್ರಚಾರವು ಕೊನೆಯ ಹಂತದಲ್ಲಿರುವುದರಿಂದ ರಾಜಕೀಯ ನಾಯಕರು ಮತ್ತು ಪಕ್ಷಗಳು ಜನರ ಹೃದಯ ಗೆಲ್ಲಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಫೆಬ್ರವರಿ 8ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ

ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್

ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ

ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
