ಇನ್ನು ಸುಮ್ಮನಿದ್ದರೆ ನಡೆಯಲ್ಲ, ತುಳಿಯುವ ಪ್ರಯತ್ನ ಮಾಡಿದರೆ ಬೀದಿಗಿಳಿದು ಹೋರಾಟ: ಬಿ ಶ್ರೀರಾಮುಲು
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಬಗ್ಗೆ ಈಗಾಗಲೇ ಹೇಳಿಯಾಗಿದೆ, ಈಗೇನೂ ಕಾಮೆಂಟ್ ಮಾಡಲ್ಲ, ಆದರೆ ಒಂದು ಮಾತು ಮಾತ್ರ ಸತ್ಯ, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ರಾಷ್ಟ್ರೀಯ ನಾಯಕರು ಸರಿಮಾಡಬಹುದಾಗಿದೆ, ಅವರು ಮಧ್ಯೆ ಪ್ರವೇಶಿಸುವ ಅವಶ್ಯಕತೆಯಂತೂ ಖಂಡಿತ ಇದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಗದಗ: ಬಿಜೆಪಿ ನಾಯಕ ಬಿ ಶ್ರೀರಾಮುಲು ಗೊಂದಲದಲ್ಲಿರುವಂತಿದೆ. ಒಮ್ಮೆ ಸೌಮ್ಯವಾಗಿ ಮತ್ತೊಮ್ಮೆ ಬಿರುಸಾಗಿ ಮಾತಾಡುತ್ತಾರೆ. ಇವತ್ತು ಗದಗಿನಲ್ಲಿ ಮಾತಾಡಿದ ಅವರು ತಾನಿನ್ನು ಸುಮ್ಮನಿರಲ್ಲ, ತಮ್ಮನ್ನು ತುಳಿಯುವ ಪ್ರಯತ್ನ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ. ದೆಹಲಿಗೆ ತೆರಳಿ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲು ತನಗೇನೂ ಪೂರ್ವಾನುಮತಿ ಬೇಕಿಲ್ಲ, ಅಲ್ಲಿಗೆ ಹೋಗಿ ಅವರೊಂದಿಗೆ ಮಾತಾಡುವ ಸಂದರ್ಭ ಸೃಷ್ಟಿಯಾಗಿದೆ, ಪಕ್ಷದ ಇಮೇಜಿಗೆ ಧಕ್ಕೆಯಾಗಬಾರದು ಅಂತ ಇಷ್ಟು ದಿನ ಮಾತಾಡದೆ ಸುಮ್ಮನಿದ್ದೆ, ಅದರೆ ಸುಮ್ಮನಿದ್ದರೆ ಸರಿಹೋಗಲ್ಲ ಅಂತ ಮನದಟ್ಟಾಗಿದೆ ಎಂದು ಶ್ರೀರಾಮುಲು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ತಾನೂ ಒಬ್ಬ ಆಕಾಂಕ್ಷಿ ಅಂತ ಖಚಿತಪಡಿಸಿದ ಬಿ ಶ್ರೀರಾಮುಲು
Latest Videos