ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ತಾನೂ ಒಬ್ಬ ಆಕಾಂಕ್ಷಿ ಅಂತ ಖಚಿತಪಡಿಸಿದ ಬಿ ಶ್ರೀರಾಮುಲು
ಪಕ್ಷದಲ್ಲಿ ಯಾರು ಹೆಚ್ಚು ಶಕ್ತಿವಂತರು ಅಂತ ಚರ್ಚೆ ನಡೆಯುತ್ತಿದೆ, ಆದರೆ ಶಕ್ತಿಯನ್ನು ಪಕ್ಷದ ಸಂಘಟನೆನಗಾಗಿ ಬಳಸಬೇಕಿದೆ, ಪಕ್ಷದ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರೇ ಮುಂದುವರಿಯಲಿ ತನ್ನ ಅಭ್ಯಂತರವೇನೂ ಇಲ್ಲ ಎಂದು ಶ್ರೀರಾಮುಲು ಹೇಳಿದರು. ಅವಕಾಶವಿದ್ದರೆ ತನಗೂ ರಾಜ್ಯಾಧ್ಯಕ್ಷನ ಸಿಗಲಿ ಎನ್ನುವ ಶ್ರೀರಾಮುಲು ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ ಅನ್ನೋದನ್ನು ಸ್ಪಷ್ಟಪಡಿಸುತ್ತಾರೆ.
ವಿಜಯನಗರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಯಾವತ್ತೂ ಪಾರ್ಟಿಯ ವಿರುದ್ಧ ಮಾತಾಡಿದವರಲ್ಲ, ಕೆಲ ವ್ಯಕ್ತಿಗಳ ವಿರುದ್ಧ ಅವರು ಮಾತಾಡಿದ್ದಾರೆ, ವ್ಯಕ್ತಿಗತ ಟೀಕೆಯು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆಯಾಗಲಾರದು, ಯತ್ನಾಳ್ ನಿರಂತರವಾಗಿ ಪಕ್ಷದ ಒಳಿತನ್ನು ಬಯಸಿದ್ದಾರೆ, ವಿಜಯೇಂದ್ರ ಜೊತೆ ಅವರಿಗೆ ಸಂಘಟಾನಾತ್ಮಕ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಪಕ್ಷದ ರಾಷ್ಟ್ರೀಯ ನಾಯಕರು ಅವರಿಬ್ಬರ ನಡುವಿನ ಮತಭೇದ, ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ದೂರ ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ನಿರಾಸೆ, ಬಿಜೆಪಿ ಬಿಡೋದಿಲ್ಲ ಅಂತ ಖಚಿತಪಡಿಸಿದ ಮಾಜಿ ಸಚಿವ ಬಿ ಶ್ರೀರಾಮುಲು