ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಡಿಕೆ ಶಿವಕುಮಾರ್
ಲೋಧಿ ಗಾರ್ಡನ್ ಪ್ರದೇಶದಲ್ಲಿ ಮತದಾರರೊಂದಿಗೆ ಸಂವಾದವನ್ನೂ ನಡೆಸಿದ ಶಿವಕುಮಾರ್ ಅವರು, ಅಭಿಕಷೇಕ್ ಪರ ಮತ ಚಲಾಯಿಸಿ ಅವರನ್ನು ಗೆಲ್ಲಿಸಿದರೆ ತಾನು ಮತ್ತೊಮ್ಮೆ ಬಂದು ಅಲ್ಲಿಯ ಜನರೊಂದಿಗೆ ಪಾರ್ಟಿ ಮಾಡುವುದಾಗಿ ಹೇಳಿದರು. ಶಿವಕುಮಾರ್ ಅವರಿಗೆ ರಾಜ್ಯದಲ್ಲಿ ಮಾಸ್ ಅಪೀಲ್ ಇರಬಹುದು, ಅದರೆ ಅದು ದೆಹಲಿಯಲ್ಲೂ ವರ್ಕೌಟ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕು.
ದೆಹಲಿ: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿನ್ನೆ ಅವಸರದಲ್ಲಿ ದೆಹಲಿಗೆ ಹೊರಟಿದ್ದು ಕನ್ನಡಿಗರಿಗೆ ಗೊತ್ತಿದೆ, ಆದರೆ ಯಾಕೆ ಹೋದರು ಅಂತ ಗೊತ್ತಾಗಿರಲಿಲ್ಲ. ಅಸಲಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಖ ಪರ ಪ್ರಚಾರ ಮಾಡಲು ಹೈಕಮಾಂಡ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಶಿವಕುಮಾರ್ ಮತ್ತು ಸಚಿವ ಡಾ ಎಂಸಿ ಸುಧಾಕರ್ ದೆಹಲಿಯ ಲೋಧಿ ಗಾರ್ಡನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡಿದರು. ದೆಹಲಿ ಕಸ್ತೂರ್ ಬಾ ನಗರ ಕ್ಷೇತ್ರದಿಂದ ಕಾಂಗ್ರೆಸ್ ನ ಅಭಿಷೇಕ್ ದತ್ ಸ್ಪರ್ಧಿಸಿದ್ದು ಶಿವಕುಮಾರ್ ಅವರಿಗಾಗಿ ಮತ ಯಾಚಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಧಾವಂತದಲ್ಲಿ ದೆಹಲಿಗೆ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಕೋಟು ತೊಟ್ಟರು
Published on: Feb 01, 2025 11:40 AM