ನಿಷ್ಕ್ರಿಯ ಮತ್ತು ಸಂವೇದನೆಹೀನ ಸರ್ಕಾರಗಳಿಂದಾಗಿ ವಿಸಿ ನಾಲೆಗೆ ಮತ್ತೊಂದು ವಾಹನ ಬಿದ್ದಿದೆ: ಸ್ಥಳೀಯ
ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ಹೇಳಿಕೆಗಳನ್ನು ನೀಡುತ್ತ ಕಾಲಹರಣ ಮಾಡುವ ಬದಲು ವಿಸಿ ನಾಲೆಗೆ ತಡೆಗೋಡೆ ನಿರ್ಮಿಸುವ ಕೆಲಸಕ್ಕೆ ಮುಂದಾಗಿದ್ದರೆ ಹಲವಾರು ಪ್ರಾಣಗಳನ್ನು ಉಳಿಸಬಹುದಿತ್ತ್ತು. ಸುಮಲತಾ ಸಂಸದರಾಗಿದ್ದ ಅವಧಿಯಲ್ಲಿ ತಡೆಗೋಡೆ ಬಗ್ಗೆ ಯೋಚಿಸಲಿಲ್ಲ. ಈಗ ಕೇಂದ್ರದಲ್ಲಿ ಸ
ಮಂಡ್ಯ: ಜಿಲ್ಲೆಯ ಹಲವು ತಾಲ್ಲೂಕುಗಳ ಮೂಲಕ ಹರಿಯುವ ವಿಸಿ ನಾಲೆ ಜನರನ್ನು ಬಲಿಪಡೆಯುವ ಕೆಲಸವನ್ನು ನಿಲ್ಲಿಸಲ್ಲ. ಯಾಕೆ ಅಂತ ಬಿಡಿಸಿ ಹೇಳಬೇಕಿಲ್ಲ. 2018 ರಿಂದ ನಮ್ಮ ರಾಜ್ಯದಲ್ಲಿ ವಿವೇಚನೆ, ವಿವೇಕವುಳ್ಳ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಕಳೆದ 7 ವರ್ಷಗಳ ಅವಧಿಯಲ್ಲಿ ಕನಿಷ್ಠ 7-8 ಬಾರಿ ಬಸ್ಸು, ಕಾರು, ದ್ವಿಚಕ್ರವಾಹನಗಳು ವಿಸಿ ನಾಲೆಗೆ ಉರುಳಿ ಬಿದ್ದಿವೆ ಮತ್ತು ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾಲೆಗೆ ತಡೆಗೋಡೆ ಇಲ್ಲದಿರುವುದು ಎಲ್ಲ ಅಪಘಾತಗಳಿಗೆ ಕಾರಣ. ಇವತ್ತು ಕಾರು ಉರುಳಿ ಬಿದ್ದಿದ್ದು ಸಹ ಅದೇ ಕಾರಣಕ್ಕೆ ಎಂದು ಸ್ಥಳೀಯರು ಮತ್ತು ಕಾರಲ್ಲಿದ್ದ ನಾಲ್ವರ ಪೈಕಿ ಒಂದು ಮೃತದೇಹವನ್ನು ಮತ್ತು ಬದುಕಿರುವ ಮತ್ತೊಬ್ಬನನ್ನು ದಡಕ್ಕೆ ಎಳೆದ ಸ್ಥಳೀಯರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು: ನಾಲ್ವರ ಪೈಕಿ ಮೂವರು ಸಾವು, ಓರ್ವನ ರಕ್ಷಣೆ