ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮಹಾನ್ ನಾಯಕ; ಅವರನ್ನು ರಾಜ್ಯಕ್ಕೆ ಪದೇಪದೆ ಕರೆ ತರುವುದು ನಮಗೆ ಹೆಮ್ಮೆಯ ವಿಷಯವಾಗಿದೆ: ಡಾ ಕೆ ಸುಧಾಕರ್
ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವವೇ ಅಗ್ರಗಣ್ಯ ನಾಯಕ ಅಂತ ಒಪ್ಪಿಕೊಂಡಿದೆ, ಅವರು ನಮ್ಮ ಅತಿ ಎತ್ತರದ ನಾಯಕರಾಗಿದ್ದಾರೆ, ಹಾಗಾಗಿ ನಾವು ಅವರನ್ನು ಮತ್ತು ಅಮಿತ್ ಶಾರನ್ನು ಮೇಲಿಂದ ಮೇಲೆ ರಾಜ್ಯಕ್ಕೆ ಕರೆತರುತ್ತೇವೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಗೆ ನಾಯಕತ್ವವೇ ಇಲ್ಲ ಎಲ್ಲದಕ್ಕೂ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನೇ ಅವಲಂಬಿಸಿದ್ದಾರೆ ಎಂದು ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯೆ ನೀಡಿದರು. ಶಿವಕುಮಾರ್ ಅವರು ಬೇರೆಯವರ ತಟ್ಟೇಲಿ ಏನಿದೆ ಅಂತ ನೋಡುವ ಮೊದಲು ತಮ್ಮ ತಟ್ಟೇಲಿ ಏನು ಬಿದ್ದಿದೆ ಅಂತ ನೋಡಿಕೊಳ್ಳಲಿ ಎಂದ ಸುಧಾಕರ್, ರಾಜ್ಯದಲ್ಲಿ ಬೇಕಾದಷ್ಟು ಮಹಿಳಾ ಕಾಂಗ್ರೆಸ್ ನಾಯಕರು ಇದ್ದರೂ ಅವರು ನಾ ನಾಯಕಿ ಕಾರ್ಯಕ್ರಮಕ್ಕೆ ಯಾಕೆ ಪ್ರಿಯಾಂಕಾ ಗಾಂಧಿ ಅವರನ್ನು ಯಾಕೆ ಕರೆತಂದರು ಅಂತ ಕೇಳಿದರು. ಪ್ರಧಾನಿ ನರೇಂದ್ರ ಮೋದಿಯವರನ್ನು ವಿಶ್ವವೇ ಅಗ್ರಗಣ್ಯ ನಾಯಕ ಅಂತ ಒಪ್ಪಿಕೊಂಡಿದೆ, ಅವರು ನಮ್ಮ ಅತಿ ಎತ್ತರದ ನಾಯಕರಾಗಿದ್ದಾರೆ, ಹಾಗಾಗಿ ನಾವು ಅವರನ್ನು ಮತ್ತು ಅಮಿತ್ ಶಾ ಅವರನ್ನು ಮೇಲಿಂದ ಮೇಲೆ ರಾಜ್ಯಕ್ಕೆ ಕರೆತರುತ್ತೇವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ