AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ

ಸುಷ್ಮಾ ಚಕ್ರೆ
|

Updated on:Aug 22, 2026 | 8:52 PM

Share

ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಪದಾಧಿಕಾರಿಗಳನ್ನು ಭೇಟಿಯಾದರು. ಈ ವೇಳೆ ಪ್ರಧಾನಿಯವರು ನೂತನವಾಗಿ ನೇಮಕಗೊಂಡ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು. ಪಕ್ಷವು ಹೊಸ ಸಾಂಸ್ಥಿಕ ಹಾಗೂ ಯುವ ಕೇಂದ್ರಿತ ಸಂಪರ್ಕ ಅಭಿಯಾನಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿರುವಾಗ ಈ ಸಭೆ ನಡೆದಿದೆ. ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಪ್ರಧಾನಿಯವರನ್ನು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರು ಸ್ವಾಗತಿಸಿದರು.

ನವದೆಹಲಿ, ಆಗಸ್ಟ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳನ್ನು ಭೇಟಿಯಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಆಗಸ್ಟ್ 17ರಂದು ತಮ್ಮ 65 ಸದಸ್ಯರ ನೂತನ ತಂಡವನ್ನು ಪ್ರಕಟಿಸಿದ ನಂತರ ನಡೆದ ಮೊದಲ ಸಭೆ ಇದಾಗಿದೆ.

ಈ ಸಭೆಯ ನಂತರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಪಕ್ಷದ ಸಭೆಗಳು ಯಾವಾಗಲೂ ಪಕ್ಷವನ್ನು ಬಲಪಡಿಸುವ ಮತ್ತು ಜನರೊಂದಿಗಿನ ಸಂಪರ್ಕವನ್ನು ಮತ್ತಷ್ಟು ಆಳವಾಗಿಸುವ ಹೊಸ ಆಲೋಚನೆಗಳು ಹಾಗೂ ದೃಷ್ಟಿಕೋನಗಳಿಗೆ ವೇದಿಕೆಯಾಗಿರುತ್ತವೆ. ನನ್ನ ಸಹೋದ್ಯೋಗಿಗಳು ಮತ್ತು ನೂತನ ಸಾಂಸ್ಥಿಕ ತಂಡದೊಂದಿಗೆ ಉತ್ತಮ ಸಂವಾದ ನಡೆಯಿತು” ಎಂದು ತಿಳಿಸಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 22, 2026 08:51 PM

Follow Us