AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬಕ್ಕೆ ಕಿಂಗ್ ಚಾರ್ಲ್ಸ್ ಉಡುಗೊರೆಯಾಗಿ ಕೊಟ್ಟ ಕದಂಬ ಸಸಿ ನೆಟ್ಟ ಪ್ರಧಾನಿ ಮೋದಿ

ಹುಟ್ಟುಹಬ್ಬಕ್ಕೆ ಕಿಂಗ್ ಚಾರ್ಲ್ಸ್ ಉಡುಗೊರೆಯಾಗಿ ಕೊಟ್ಟ ಕದಂಬ ಸಸಿ ನೆಟ್ಟ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on:Sep 19, 2025 | 3:13 PM

Share

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಕಿಂಗ್ ಚಾರ್ಲ್ಸ್ ಅವರು ಉಡುಗೊರೆ ನೀಡಿದ ಕದಂಬ ಸಸಿಯನ್ನು ಇಂದು ತಮ್ಮ ನಿವಾಸದ ಹೊರಗೆ ನೆಟ್ಟಿದ್ದಾರೆ. ಇದು ಭಾರತ-ಯುಕೆ ಹಸಿರು ಒಪ್ಪಂದವನ್ನು ಸಂಕೇತಿಸುತ್ತದೆ. ಈ ಸಸಿಯು ಪ್ರಧಾನ ಮಂತ್ರಿಯವರ 75 ನೇ ಹುಟ್ಟುಹಬ್ಬಕ್ಕೆ ಯುನೈಟೆಡ್ ಕಿಂಗ್‌ಡಮ್‌ನ ರಾಜ ಚಾರ್ಲ್ಸ್ III ಅವರಿಂದ ವಿಶೇಷ ಉಡುಗೊರೆಯಾಗಿದೆ. ಈ ಸಸಿಯು ಮೋದಿ ಅವರ 'ಏಕ್ ಪೆಡ್ ಮಾ ಕೆ ನಾಮ್' ಉಪಕ್ರಮದಿಂದ ಪ್ರೇರಿತವಾಗಿದೆ.

ದೆಹಲಿ, ಸೆಪ್ಟೆಂಬರ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ದೆಹಲಿಯಲ್ಲಿರುವ ತಮ್ಮ ಸರ್ಕಾರಿ ನಿವಾಸವಾದ 7 ಲೋಕ್ ಕಲ್ಯಾಣ್ ಮಾರ್ಗದಲ್ಲಿ ಕದಂಬ ಸಸಿಯನ್ನು (Kadamb Plant) ನೆಟ್ಟರು. ಈ ಸಸಿಯನ್ನು ಯುನೈಟೆಡ್ ಕಿಂಗ್‌ಡಮ್‌ನ ಕಿಂಗ್ ಚಾರ್ಲ್ಸ್ III ಅವರು ಮೋದಿಯ 75ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದರು. ಇದು ಸ್ನೇಹ ಮತ್ತು ಪರಿಸರ ಸುಸ್ಥಿರತೆಗೆ ಹಂಚಿಕೆಯ ಬದ್ಧತೆಯನ್ನು ಸಂಕೇತಿಸುತ್ತದೆ. ಹಾಗೇ, ಭಾರತ-ಯುಕೆ ಹಸಿರು ಒಪ್ಪಂದವನ್ನು ಸಂಕೇತಿಸುತ್ತದೆ. ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಕಿಂಗ್ ಚಾರ್ಲ್ಸ್ ಅವರ ಈ ಉಡುಗೊರೆ ಪರಿಸರ ಸಂರಕ್ಷಣೆಗೆ ಭಾರತ ಮತ್ತು ಇಂಗ್ಲೆಂಡ್​​ನ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮವು ಹವಾಮಾನ, ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಭಾರತ-ಯುಕೆ ಗಮನವನ್ನು ಎತ್ತಿ ತೋರಿಸುತ್ತದೆ. ಇವು ಅವರ ವಿಷನ್ 2035 ಪಾಲುದಾರಿಕೆಯ ಪ್ರಮುಖ ಅಂಶಗಳಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 19, 2025 03:10 PM