AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ಪ್ರಧಾನಿ ಮೋದಿಯ ಪೋಸ್ಟರ್​ ಸ್ವಚ್ಛಗೊಳಿಸಿ ಪ್ರೀತಿ ತೋರಿದ ಶ್ರೀಸಾಮಾನ್ಯ

PM Narendra Modi: ಪ್ರಧಾನಿ ಮೋದಿಯ ಪೋಸ್ಟರ್​ ಸ್ವಚ್ಛಗೊಳಿಸಿ ಪ್ರೀತಿ ತೋರಿದ ಶ್ರೀಸಾಮಾನ್ಯ

ಕಿರಣ್​ ಐಜಿ
|

Updated on: Apr 21, 2023 | 8:03 PM

ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ರೋಡ್​ ಶೋ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ ಸ್ವಚ್ಛಗೊಳಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ರೋಡ್​ಶೋ ಆರಂಭಕ್ಕೂ ಮೊದಲೇ ಮಳೆ ಬಂದಿತ್ತು. ಇದರಿಂದಾಗಿ ಪೋಸ್ಟರ್ ಒದ್ದೆಯಾಗಿತ್ತು. ಆ ಸಂದರ್ಭದಲ್ಲಿ ಅವರು, ಮೋದಿಯವರ ಪೋಸ್ಟರ್ ಅನ್ನು ಒರೆಸಿ, ಸ್ವಚ್ಚಗೊಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಜನಸಾಮಾನ್ಯರಿಗೆ ಎಲ್ಲಿಲ್ಲದ ಪ್ರೀತಿ. ಮೋದಿಯವರ ಕೆಲಸ ಕಾರ್ಯಗಳ ಅರಿವಿರುವ ಜನರು, ಅವರ ಬಗ್ಗೆ ಕೇಳಿದಾಗ, ಮೋದಿಯವರನ್ನು ನೋಡಿದಾಗ ಅಭಿಮಾನದಿಂದ ವರ್ತಿಸಿ, ಪ್ರೀತಿ ತೋರುತ್ತಾರೆ. ಪ್ರಧಾನಿ ಮೋದಿಯವರ ರೋಡ್​ ಶೋಗೆ ಸೇರುವ ಜನಸಾಗರವೇ ಅದಕ್ಕೆ ಸಾಕ್ಷಿ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ರೋಡ್​ ಶೋ ಸಮಾರಂಭದಲ್ಲಿ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ ಸ್ವಚ್ಛಗೊಳಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ರೋಡ್​ಶೋ ಆರಂಭಕ್ಕೂ ಮೊದಲೇ ಮಳೆ ಬಂದಿತ್ತು. ಇದರಿಂದಾಗಿ ಪೋಸ್ಟರ್ ಒದ್ದೆಯಾಗಿತ್ತು. ಆ ಸಂದರ್ಭದಲ್ಲಿ ಅವರು, ಮೋದಿಯವರ ಪೋಸ್ಟರ್ ಅನ್ನು ಒರೆಸಿ, ಸ್ವಚ್ಚಗೊಳಿಸಿದ್ದಾರೆ. ಈ ಕಾರ್ಯಕ್ಕಾಗಿ ನನಗೆ ಯಾರೂ ಹಣ ಕೊಟ್ಟಿಲ್ಲ. ಹಣ ಪಡೆಯುವುದೂ ಇಲ್ಲ. ಪ್ರಧಾನಿ ಮೋದಿಯವರ ಮೇಲಿನ ಪ್ರೀತಿ, ವಿಶ್ವಾಸದಿಂದ ಹೀಗೆ ಮಾಡುತ್ತಿದ್ದೇನೆ ಎಂದಿದ್ದಾರೆ. ಜತೆಗೆ, ಪ್ರಧಾನಿ ಮೋದಿ ದೇಶಕ್ಕಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ, ಅವರು ದೇವರಿದ್ದಂತೆ ಎಂದು ಆತ ನುಡಿಯುವುದು ವಿಡಿಯೊದಲ್ಲಿ ದಾಖಲಾಗಿದೆ.