AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ  ಕಲಬುರಗಿಯ ಖಡಕ್ ರೊಟ್ಟಿ

ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Jun 29, 2025 | 5:43 PM

Share

ಪ್ರತಿ ತಿಂಗಳ ಕೊನೆ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್​​ ಕಿ ಬಾತ್’ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಯಾರೇ ಒಂದು ವಿಶಿಷ್ಟ ಸಾಧನೆ ಮಾಡಿದರೂ ಸಹ ಮೋದಿ ಮನ್​ ಕಿ ಬಾತ್​ ನಲ್ಲಿ ಮೆಲುಕಿ ಹಾಕಿ ಅಭಿನಂದನೆ ತಿಳಿಸುತ್ತಾರೆ. ಅದರಂತೆ ಇಂದಿನ ಮನ್​​ ಕಿ ಬಾಂತ್​ ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಸದ್ದು ಮಾಡಿದೆ. ಹೌದು...ಇಂದು (ಜೂನ್ 29) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್​ ​ಕಿ ಬಾತ್​ ನ ​ 123ನೇ ಸಂಚಿಕೆಯಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಬಗ್ಗೆ ಗುಣಗಾನ ಮಾಡಿದ್ದಾರೆ.

ಕಲಬುರಗಿ, (ಜೂಣ್ 29): ಪ್ರತಿ ತಿಂಗಳ ಕೊನೆ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್​​ ಕಿ ಬಾತ್’ ನಲ್ಲಿ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಯಾರೇ ಒಂದು ವಿಶಿಷ್ಟ ಸಾಧನೆ ಮಾಡಿದರೂ ಸಹ ಮೋದಿ ಮನ್​ ಕಿ ಬಾತ್​ ನಲ್ಲಿ ಮೆಲುಕಿ ಹಾಕಿ ಅಭಿನಂದನೆ ತಿಳಿಸುತ್ತಾರೆ. ಅದರಂತೆ ಇಂದಿನ ಮನ್​​ ಕಿ ಬಾಂತ್​ ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಸದ್ದು ಮಾಡಿದೆ. ಹೌದು…ಇಂದು (ಜೂನ್ 29) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್​ ​ಕಿ ಬಾತ್​ ನ ​ 123ನೇ ಸಂಚಿಕೆಯಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಬಗ್ಗೆ ಗುಣಗಾನ ಮಾಡಿದ್ದಾರೆ.

ಕಲಬುರಗಿ ಜಿಲ್ಲಾಡಳಿತವು ಸ್ವಸಾಯ ಮಹಿಳಾ ಸಂಘದ ಮೂಲಕ ರೊಟ್ಟಿ ಬ್ರ್ಯಾಂಡ್ ಮಾಡಿದ್ದು, ಇದೀಗ ಈ ಕಲಬುರಗಿ ರೊಟ್ಟಿ ರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಆಗಿದೆ. ಸದ್ಯ ಆನ್ ಲೈನ್ ನಲ್ಲೂ ಕಲಬುರಗಿ ರೊಟ್ಟಿಗೆ ಸಖತ್ ಬೇಡಿಕೆ ಇದೆ. ಜಿಲ್ಲಾಡಳಿತದಿಂದ 100 ರೊಟ್ಟಿ‌ ಮಾಡೋ‌ ಯಂತ್ರ ವಿತರಣೆ ಮಾಡಲಾಗಿತ್ತು. ಮಹಿಳಾ ಸ್ವಸಾಯ ಗುಂಪುಗಳಿಗೆ ನೀಡಿ ರೊಟ್ಟಿ ತಯಾರು ಮಾಡಿಸಲಾಗಿದೆ. ಆ ಮೂಲಕ ಸಾವಿರಾರು ಮಹಿಳೆಯರಿಗೆ ಉದ್ಯೋಗ ಅವಕಾಶ ನೀಡಿತ್ತು. ಆ ರೊಟ್ಟಿಗೆ ಜಿಲ್ಲಾಡಳಿತ ಬ್ರ್ಯಾಂಡ್ ಮಾಡಿ ಮಾರುಕಟ್ಟೆ ಒದಗಿಸಿತ್ತು. ಇದೀಗ ಇದನ್ನೇ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್​ ನಲ್ಲಿ ಕೊಂಡಾಡಿದಿದ್ದಾರೆ.