ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

Updated on: Dec 18, 2025 | 7:49 PM

ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಸಹೋದರ ಮತ್ತು ಸುಲ್ತಾನರ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದಾಯ ಹೇಳಿದರು. ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧ ಮತ್ತು ಅವರ ಆತ್ಮೀಯ ಸೌಹಾರ್ದತೆಯನ್ನು ಎತ್ತಿ ತೋರಿಸುತ್ತಾ, ಇಬ್ಬರೂ ನಾಯಕರು ಕೈಕುಲುಕಿ ಪರಸ್ಪರ ಅಪ್ಪಿಕೊಂಡರು. ಓಮನ್ ಉಪ ಪ್ರಧಾನಿ ಕೂಡ ಪ್ರಧಾನಿ ಮೋದಿ ಅವರಿಗೆ ವಿದಾಯ ಹೇಳುವಾಗ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಕೈ ಮುಗಿದು ನಮಸ್ಕರಿಸಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.

ನವದೆಹಲಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ (PM Modi Oman Visit) ಓಮನ್​ಗೆ ತಮ್ಮ ಐತಿಹಾಸಿಕ ಭೇಟಿಯನ್ನು ಮುಗಿಸಿ ದೆಹಲಿಗೆ ವಾಪಾಸ್ ಹೊರಟಿದ್ದಾರೆ. ಈ ವೇಳೆ ಓಮನ್ ಸುಲ್ತಾನರ ಸಹೋದರ ‘ನಮಸ್ತೆ’ ಎಂದು ಕೈ ಮುಗಿದು, ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಬೀಳ್ಕೊಟ್ಟಿದ್ದಾರೆ. ನಿನ್ನೆ (ಬುಧವಾರ) ಇಥಿಯೋಪಿಯಾದಿಂದ ಪ್ರಧಾನಿ ಮೋದಿ ಓಮನ್​ಗೆ ಆಗಮಿಸಿದ್ದರು. ಒಟ್ಟು 3 ದೇಶಗಳ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ 4 ದಿನಗಳ ಬಳಿಕ ಇದೀಗ ದೆಹಲಿಗೆ ವಾಪಾಸಾಗುತ್ತಿದ್ದಾರೆ.

ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರ ಸಹೋದರ ಮತ್ತು ಸುಲ್ತಾನರ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ವಿದಾಯ ಹೇಳಿದರು. ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧ ಮತ್ತು ಅವರ ಆತ್ಮೀಯ ಸೌಹಾರ್ದತೆಯನ್ನು ಎತ್ತಿ ತೋರಿಸುತ್ತಾ, ಇಬ್ಬರೂ ನಾಯಕರು ಕೈಕುಲುಕಿ ಪರಸ್ಪರ ಅಪ್ಪಿಕೊಂಡರು. ಓಮನ್ ಉಪ ಪ್ರಧಾನಿ ಕೂಡ ಪ್ರಧಾನಿ ಮೋದಿ ಅವರಿಗೆ ವಿದಾಯ ಹೇಳುವಾಗ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಕೈ ಮುಗಿದು ನಮಸ್ಕರಿಸಿ ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ