ಜಗಜ್ಯೋತಿ ಬಸವೇಶ್ವರ ನಾಡಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿದ ಪ್ರಧಾನಿ ನರೇಂದ್ರ ಮೋದಿ
ಹೆಲಿಪ್ಯಾಡ್ ನಿಂದ ಇಲ್ಲಿಗೆ ರೋಡ್ ಶೋನಲ್ಲಿ ಬರುವಾಗ ಬಿಸಿಲ ಧಗೆಯಲ್ಲೂ ರಸ್ತೆಗಳ ಇಕ್ಕೆಲಗಳಲ್ಲಿ ನಿಂತ ಜನ ಹರ್ಷೋಲ್ಲಾಸಗಳಿಂದ ಆಶೀರ್ವಾದ ಮಾಡುತ್ತಿದ್ದುದನ್ನು ಗಮನಿಸುವಾಗ ಕರ್ನಾಟಕ ಜನರ ನಿರ್ಧಾರ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದ ಪ್ರಧಾನಿ ಮೋದಿ ‘ಅಬ್ ಕೀ ಬಾರ್’ ಅಂತ ಹೇಳಿದಾಗ, ಜನ ಒಕ್ಕೊರಲಿನಿಂದ ‘400 ಪಾರ್’ ಅಂತ ಕೂಗಿದರು.
ಕಲಬುರಗಿ: ನಗರದಲ್ಲಿ ಇಂದು ಆಯೋಜಿಸಿದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜ್ಯದಲ್ಲಿ ಪ್ರತಿಬಾರಿ ಮಾಡುವ ಹಾಗೆ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಜಗದ್ಗುರು ಬಸವೇಶ್ವರ (Jagadguru Basaveshwara) ಅವರ ನಾಡಾಗಿರುವ ಕಲಬುರಗಿಯ ಜನತೆಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಹೇಳಿದಾಗ ರೋಮಾಂಚನಗೊಂಡ ಜನ ಮಾಡಿದ ಹರ್ಷೊದ್ಗಾರ ಮುಗಿಲು ಮುಟ್ಟಿತು. ನಗರದ ಎನ್ ವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ ಸಂಕಲ್ಪ ಸಮಾವೇಶದಲ್ಲಿ ತಮ್ಮ ಮಾತು ಮುಂದುವರಿಸಿ ಮಾತಾಡಿದ ಮೋದಿ, ಇಂಥ ಉರಿಬಿಸಿಲಿನಲ್ಲೂ ನೆರೆದಿರುವ ಜನಸಾಗರ ಮತ್ತು ಅವರ ಮುಖಗಳಲ್ಲಿ ಕಾಣುತ್ತಿರುವ ಉತ್ಸಾಹವನ್ನು ನೋಡುತ್ತಿದ್ದರೆ, ಕರ್ನಾಟಕದ ಜನ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆಯ ಸ್ಥಾನಗಳನ್ನು ನೀಡುವ ಸಂಕಲ್ಪ ಮಾಡಿಕೊಂಡಿರುವಂತಿದೆ ಎಂದು ಹೇಳಿದರು. ಇನ್ನೂ ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ, ಆದರೆ ಹೆಲಿಪ್ಯಾಡ್ ನಿಂದ ಇಲ್ಲಿಗೆ ರೋಡ್ ಶೋನಲ್ಲಿ ಬರುವಾಗ ಬಿಸಿಲ ಧಗೆಯಲ್ಲೂ ರಸ್ತೆಗಳ ಇಕ್ಕೆಲಗಳಲ್ಲಿ ನಿಂತ ಜನ ಹರ್ಷೋಲ್ಲಾಸಗಳಿಂದ ಆಶೀರ್ವಾದ ಮಾಡುತ್ತಿದ್ದುದನ್ನು ಗಮನಿಸುವಾಗ ಕರ್ನಾಟಕ ಜನರ ನಿರ್ಧಾರ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದ ಪ್ರಧಾನಿ ಮೋದಿ ‘ಅಬ್ ಕೀ ಬಾರ್’ ಅಂತ ಹೇಳಿದಾಗ, ಜನ ಒಕ್ಕೊರಲಿನಿಂದ ‘400 ಪಾರ್’ ಅಂತ ಕೂಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾತ್ಮಾ ಗಾಂಧಿ ಕರ್ಮಭೂಮಿ ಸಬರಮತಿ ಆಶ್ರಮವನ್ನು ನವೀಕರಿಸುವ ಸಂಕಲ್ಪ ತೊಟ್ಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ