Narendra Modi: ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು, ಇಲ್ಲಿದೆ ನೇರಪ್ರಸಾರ

Updated on: May 13, 2025 | 3:32 PM

ಭಾರತ-ಪಾಕಿಸ್ತಾನ ಕದನವಿರಾಮದ ಬಳಿಕ ಇಂದು (ಮೇ 13) ಬೆಳಗ್ಗೆ ಪಂಜಾಬ್‌ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಾಯುಪಡೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. "ಆಪರೇಷನ್ ಸಿಂಧೂರ್" ನಂತರ, ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರವೂ ಒಂದು. ಹೀಗಾಗಿ ಸೈನಿಕರಿಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನು ಪಂಜಾಬ್​ನ ಆದಂಪುರ ಏರ್​ಬೇಸ್​​ಗೆ ಭೇಟಿ ನೀಡಿ ಸೈನಿಕರೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ಸಂವಾದದ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಗಿದೆ.

ನವದೆಹಲಿ, (ಮೇ 13): ಭಾರತ-ಪಾಕಿಸ್ತಾನ ಕದನವಿರಾಮದ ಬಳಿಕ ಇಂದು (ಮೇ 13) ಬೆಳಗ್ಗೆ ಪಂಜಾಬ್‌ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಾಯುಪಡೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಹಾಗೇ, ಅಲ್ಲಿನ ಸೈನಿಕರ ಜೊತೆ ಕಾಲ ಕಳೆದು, ಸಂವಾದ ನಡೆಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಭಾರತದ “ಆಪರೇಷನ್ ಸಿಂಧೂರ್” ನಂತರ, ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರವೂ ಒಂದು. ಹೀಗಾಗಿ ಸೈನಿಕರಿಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನು ಪಂಜಾಬ್​ನ ಆದಂಪುರ ಏರ್​ಬೇಸ್​​ಗೆ ಭೇಟಿ ನೀಡಿ ಸೈನಿಕರೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ಸಂವಾದದ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಗಿದೆ.