ಇಸ್ರೋಗೆ ಪ್ರಧಾನಿ ಭೇಟಿ; ಈ ರಸ್ತೆಗಳನ್ನು ಅವಾಯ್ಡ್ ಮಾಡಿ ಎಂದ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್
ಇಸ್ರೋ ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆ ನಾಳೆ (ಆ.25) ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಇಸ್ರೋಗೆ ಭೇಟಿ ನೀಡಿಲಿದ್ದಾರೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ.
ಬೆಂಗಳೂರು, ಆ.25: ಇಸ್ರೋ ಚಂದ್ರಯಾನ-3 (Chandrayan-3) ಯಶಸ್ವಿಯಾದ ಹಿನ್ನಲೆ ನಾಳೆ(ಆ.25) ಬೆಳಗ್ಗೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆಗಮಿಸಲಿದ್ದಾರೆ. ಬೆಳಗ್ಗೆ 6 ಗಂಟೆಗೆ HAL ಏರ್ಪೋರ್ಟ್ಗೆ ಆಗಮಿಸುವ ಪ್ರಧಾನಿಯವರು, 6.30ಕ್ಕೆ HAL ಏರ್ಪೋರ್ಟ್ನಿಂದ ಟ್ರಿನಿಟಿ ಸರ್ಕಲ್, ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್ ರೋಡ್, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್ ರಸ್ತೆ, ಮಾರಮ್ಮ ಸರ್ಕಲ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ ಮೂಲಕ ಇಸ್ರೋಗೆ ಭೇಟಿ ನೀಡಿಲಿದ್ದಾರೆ. ಹಾಗಾಗಿ ಈ ರಸ್ತೆಗಳನ್ನು ಅವಾಯ್ಡ್ ಮಾಡಿ ಇತರ ಪರ್ಯಾಯ ರಸ್ತೆಗಳನ್ನು ಬಳಸಲು ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಸೂಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ