ಚಂದ್ರನ ಅಂಗಳದಲ್ಲಿ ಮುಂದುವರಿದ ಪ್ರಜ್ಞಾನ್ ಕಾರ್ಯಾಚರಣೆ: 8 ಮೀಟರ್ ಸಂಚರಿಸಿದ ರೋವರ್, ಇಸ್ರೋ ಟ್ವೀಟ್
ಚಂದ್ರನ ಅಂಗಳದಲ್ಲಿ ಓಡಾಟ ನಡೆಸುತ್ತಿರುವ ಪ್ರಜ್ಞಾನ್ ರೋವರ್, ಸಂಪೂರ್ಣವಾಗಿ ಅಧ್ಯಯನ ಆರಂಭಿಸಿದ್ದು, ಇದುವರೆಗೂ ಒಟ್ಟು 8 ಮೀಟರ್ ದೂರವನ್ನ ಸಂಚರಿಸಿದೆ ಹಾಗೂ ಪ್ರಜ್ಞಾನ್ ರೋವರ್‌ನ ಎಲ್ಲಾ ಸಿಸ್ಟಮ್‌ಗಳು ನಾರ್ಮಲ್ ಆಗಿವೆ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಬೆಂಗಳೂರು, ಆಗಸ್ಟ್ 25: ಇದೀಗ ಇಡೀ ಪ್ರಪಂಚವೇ ನಮ್ಮ ದೇಶವನ್ನ ತಿರುಗಿ ನೋಡುತ್ತಿದೆ. ಚಂದ್ರಯಾನ 3 (Chandrayaan 3) ಯಶ್ವಸ್ವಿಯಾಗಿದ್ದು, ಚಂದ್ರನ ಮೇಲೆ ವಿಕ್ರಮ್ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಚಂದ್ರನ ಅಂಗಳದಲ್ಲಿ ಸದ್ಯ ಪ್ರಜ್ಞಾನ್ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಚಂದ್ರಯಾನ-3 ರೋವರ್ ಕಾರ್ಯದ ಬಗ್ಗೆ ಸದ್ಯ ಇಸ್ರೋ ಟ್ವೀಟ್ ಮಾಡಿದೆ. ಎಲ್ಲಾ ಯೋಜಿತ ರೋವರ್ ಚಲನೆಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್ ದೂರ ಯಶಸ್ವಿಯಾಗಿ ಕ್ರಮಿಸಿದೆ ಎಂದು ತಿಳಿಸಿದೆ.
ರೋವರ್ ಪೇಲೋಡ್‌ಗಳಾದ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಮತ್ತು ಆಲ್ಫಾ ಪಾರ್ಟಿಕಲ್ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್ (APXS) ಆನ್ ಮಾಡಲಾಗಿದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲಾ ಪೇಲೋಡ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಇಸ್ರೋ ಟ್ವೀಟ್
Chandrayaan-3 Mission:
All planned Rover movements have been verified. The Rover has successfully traversed a distance of about 8 meters.
Rover payloads LIBS and APXS are turned ON.
All payloads on the propulsion module, lander module, and rover are performing nominally.…
— ISRO (@isro) August 25, 2023
ಆಗಸ್ಟ್ 23 ರಂದು ಯಾವಾಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಹಿತವಾಗಿ ಇಳಿಯಿತೋ, ಆವತ್ತೇ ಚಂದ್ರನ ಮೇಲೆ ಹೆಜ್ಜೆ ಇಟ್ಟಿರುವ ಪ್ರಜ್ಞಾನ್ ಹೆಸರಿನ ರೋವರ್ ಇದೀಗ ನಿಯೋಜಿಸಿದಂತೆ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿನ ಜಲ ಮೂಲ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ಚಂದ್ರಯಾನ-3: ಜಿ20ಗೆ ಭಾರತದ ಮಹತ್ವಾಕಾಂಕ್ಷೆಯ ಸಂದೇಶ ನೀಡಿದ ಚಂದ್ರನ ಮೇಲಿನ ಲ್ಯಾಂಡಿಂಗ್
ಪ್ರಜ್ಞಾನ್ ರೋವರ್ ಚಕ್ರದಲ್ಲಿ ಅಶೋಕ ಲಾಂಛನದ ನಾಲ್ಕು ಮುಖದ ಸಿಂಹ ಹಾಗೂ ಇಸ್ರೋದ ಲೋಗೋ ಇದೆ. ಈ ಎರಡು ಹೆಮ್ಮೆಯ ಚಿಹ್ನೆಗಳು ಈಗ ಚಂದ್ರನ ಅಂಗಳದಲ್ಲಿ ಮೂಡಿವೆ. ಬುಧವಾರ ಅಂದರೆ ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ವಿಕ್ರಮ್ ಲ್ಯಾಂಡರ್ನಿಂದ ಹೊರ ಬಂದ ಪ್ರಜ್ಞಾನ್ ರೋವರ್, ಇದೀಗ ಚಂದ್ರನ ಮೇಲೆ ಸುತ್ತಾಡೋಕೆ ಶುರು ಮಾಡಿದೆ.
ಇದನ್ನೂ ಓದಿ: Chandrayaan 3 Success: ಚಂದ್ರಯಾನ 3 ರ ಯಶಸ್ಸಿನ ಶ್ರೇಯಸ್ಸಿಗೆ ಶುರುವಾಗಿದೆ ಪೈಪೋಟಿ?
ಚಂದ್ರನಲ್ಲಿ ನಡೀತಿರುವ ಕ್ಷಣಕ್ಷಣದ ಮಾಹಿತಿಯನ್ನ ಇಸ್ರೋ ಹಂಚಿಕೊಳ್ಳುತ್ತಿದೆ. ಮೊನ್ನೆ ಚಂದ್ರನ ಮೇಲೆ ರೋವರ್ ಇಳಿಯುವ ಫೋಟೋ ರಿಲೀಸ್ ಮಾಡಲಾಗಿತ್ತು. ಒಟ್ಟು 14 ದಿನಗಳ ಕಾಲ ಚಂದ್ರ ಮೇಲೆ ಸಂಶೋಧನೆ ನಡೆಸಲಿರುವ ಪ್ರಜ್ಞಾನ್ ರೋವರ್ ಒಟ್ಟು 500 ಮೀಟರ್ವರೆಗೂ ಸಂಚರಿಸಲಿದೆ.
ಇದೀಗ ಚಂದ್ರನ ಅಂಗಳದಲ್ಲಿ ಓಡಾಟ ನಡೆಸುತ್ತಿರುವ ಪ್ರಜ್ಞಾನ್ ರೋವರ್, ಸಂಪೂರ್ಣವಾಗಿ ಅಧ್ಯಯನ ಆರಂಭಿಸಿದ್ದು, ಇದುವರೆಗೂ ಒಟ್ಟು 8 ಮೀಟರ್ ದೂರವನ್ನ ಸಂಚರಿಸಿದೆ ಹಾಗೂ ಪ್ರಜ್ಞಾನ್ ರೋವರ್‌ನ ಎಲ್ಲಾ ಸಿಸ್ಟಮ್‌ಗಳು ನಾರ್ಮಲ್ ಆಗಿವೆ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.