Odisha Train Accident: ಒಡಿಶಾ ರೈಲು ದುರಂತ ಸ್ಥಳದ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಮಾತಾಡಿಸಿದ ಪ್ರಧಾನಿ ನರೇಂದ್ರ ಮೋದಿ

ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ಸ್ಟೇಶನ್ ಬಳಿ ಶುಕ್ರವಾರ ರಾತ್ರಿ ನಡೆದ ಭೀಕರ ರೈಲು ಆಪಘಾತದಲ್ಲಿ ಸುಮಾರು 300 ಜನ ಮರಣಿಸಿದ್ದು 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

Odisha Train Accident: ಒಡಿಶಾ ರೈಲು ದುರಂತ ಸ್ಥಳದ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಮಾತಾಡಿಸಿದ ಪ್ರಧಾನಿ ನರೇಂದ್ರ ಮೋದಿ
|

Updated on: Jun 03, 2023 | 6:14 PM

ಬಾಲಸೋರ (ಒಡಿಶಾ): ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲು ನಿಲ್ದಾಣದ ಬಳಿ ಕಳೆದ ರಾತ್ರಿ ಸಂಭವಿಸಿದ ಘೋರ ಟ್ರೇನ್ ದುರಂತ ಸ್ಥಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಭೇಟಿ ನೀಡಿ ರೇಲ್ವೇ ಅಧಿಕಾರಿಗಳಿಂದ (Railway officials) ಮಾಹಿತಿ ಪಡೆದರು. ಪ್ರಧಾನಿ ಮೋದಿ ಅಪಘಾತ ಸ್ಥಳ ವೀಕ್ಷಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಮೇಲೆ ಪ್ರಧಾನಿ ಮೋದಿ ಕಟಕ್ (Cuttack) ನಗರದ ಅಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ನೂರಾರು ಗಾಯಾಳುಗಳನ್ನು ಭೇಟಿ ಮಾಡಿದರು. ದಕ್ಷಿಣ ಕೊಲ್ಕತ್ತಾದಿಂದ 250 ಕಿಮೀ ದೂರದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ಸ್ಟೇಶನ್ ಬಳಿ ಶುಕ್ರವಾರ ರಾತ್ರಿ ನಡೆದ ಭೀಕರ ರೈಲು ಆಪಘಾತದಲ್ಲಿ ಸುಮಾರು 300 ಜನ ಮರಣಿಸಿದ್ದು 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us