Video: ಪಿಒಕೆ ನಮ್ಮ ಮನೆಯ ಕೋಣೆ ಇದ್ದಂತೆ, ಯಾರೋ ಆಕ್ರಮಿಸಿಕೊಂಡಿದ್ದಾರೆ, ವಾಪಸ್ ಪಡೆಯಬೇಕಿದೆ: ಮೋಹನ್ ಭಾಗವತ್
ಪಿಒಕೆಯು ನಮ್ಮ ಮನೆಯ ಕೋಣೆ ಇದ್ದಂತೆ, ಯಾರೋ ಆಕ್ರಮಿಸಿಕೊಂಡಿದ್ದಾರೆ, ಅದನ್ನು ಹಿಂಪಡೆಯಬೇಕಿದೆ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಸತ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬಲವಾದ ಸಂದೇಶವನ್ನು ರವಾನಿಸಿ, ಅಖಂಡ ಭಾರತಕ್ಕಾಗಿ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಇಡೀ ದೇಶವೇ ಒಂದು ಮನೆ, ಆದರೆ, ನಮ್ಮ ಮನೆಯಲ್ಲಿ ನಾನು ನನ್ನ ಮೇಜು, ಕುರ್ಚಿ, ಬಟ್ಟೆ ಇತ್ಯಾದಿಗಳನ್ನು ಇಡುತ್ತಿದ್ದ ಒಂದು ಕೋಣೆಯನ್ನು ಯಾರೋ ವಶಪಡಿಸಿಕೊಂಡಿದ್ದಾರೆ.
ಸತ್ನಾ, ಅಕ್ಟೋಬರ್ 06: ಪಿಒಕೆಯು ನಮ್ಮ ಮನೆಯ ಕೋಣೆ ಇದ್ದಂತೆ, ಯಾರೋ ಆಕ್ರಮಿಸಿಕೊಂಡಿದ್ದಾರೆ, ಅದನ್ನು ಹಿಂಪಡೆಯಬೇಕಿದೆ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಸತ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬಲವಾದ ಸಂದೇಶವನ್ನು ರವಾನಿಸಿ, ಅಖಂಡ ಭಾರತಕ್ಕಾಗಿ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಇಡೀ ದೇಶವೇ ಒಂದು ಮನೆ, ಆದರೆ, ನಮ್ಮ ಮನೆಯಲ್ಲಿ ನಾನು ನನ್ನ ಮೇಜು, ಕುರ್ಚಿ, ಬಟ್ಟೆ ಇತ್ಯಾದಿಗಳನ್ನು ಇಡುತ್ತಿದ್ದ ಒಂದು ಕೋಣೆಯನ್ನು ಯಾರೋ ವಶಪಡಿಸಿಕೊಂಡಿದ್ದಾರೆ.
ನಾಳೆ, ನಾನು ಅದನ್ನು ಹಿಂದಕ್ಕೆ ತೆಗೆದುಕೊಂಡು ಮತ್ತೆ ಅಲ್ಲಿ ಶಿಬಿರ ಸ್ಥಾಪಿಸಬೇಕು. ನಾವು ಅವಿಭಜಿತ ಭಾರತವನ್ನು ನೆನಪಿಸಿಕೊಳ್ಳಬೇಕು. ಒಬ್ಬ ಇಂಗ್ಲಿಷ್ ವ್ಯಕ್ತಿ ನಮಗೆ ಮುರಿದ ಕನ್ನಡಿಯನ್ನು ತೋರಿಸುವ ಮೂಲಕ ನಮ್ಮಲ್ಲಿ ವಿಭಜನೆಯನ್ನು ಸೃಷ್ಟಿಸಿದನು, ಆದರೆ ನಾವೆಲ್ಲರೂ ಸನಾತನಿಗಳು. ಈಗ ನಾವು ನಮ್ಮ ಗುರುಗಳು ತೋರಿಸಿದ ಆಧ್ಯಾತ್ಮಿಕ ಕನ್ನಡಿಯ ಮೂಲಕ ನಮ್ಮನ್ನು ನೋಡಬೇಕು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

