ಕೋಲಾರ: ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲು ಪೊಲೀಸ್ ಮತ್ತು ಅರೆಸೇನಾ ಪಡೆಗಳಿಂದ ಪಥಸಂಚಲನ

ಕೋಲಾರ: ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲು ಪೊಲೀಸ್ ಮತ್ತು ಅರೆಸೇನಾ ಪಡೆಗಳಿಂದ ಪಥಸಂಚಲನ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 26, 2024 | 11:10 AM

ಜನ ಹೆದರದೆ, ನಿರ್ಭೀತಿ ಮತ್ತು ನಿರಾತಂಕದಿಂದ ತಮ್ಮ ಹಕ್ಕು ಚಲಾಯಿಸಲು ಮತ್ತು ಮತದಾನದ ಪ್ರಾಮುಖ್ಯತೆ ಮೂಡಿಸಲು ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಪಥಸಂಚಲನ ನಡೆಸಿದವು. ಇದು ಎಲ್ಲ ಕಡೆಗಳಲ್ಲಿ ನಡೆಯಬೇಕು, ಇದರಿಂದ ಗೂಂಡಾ, ರೌಡಿಗಳ ಹುಟ್ಟಡುಗುತ್ತದೆ ಅಂತಿಲ್ಲ, ಅವರಲ್ಲಿ ಕೊಂಚ ಭಯ ಮೂಡುತ್ತದೆ, ಆದರೆ ಜನರಲ್ಲಿ ಭಯ ಮಾಯವಾಗಲು ನೆರವಾಗುತ್ತದೆ.

ಕೋಲಾರ: ಲೋಕಸಭಾ ಚುನಾವಣೆ (Lok Sabha polls) ಮತದಾನಕ್ಕೆ ಬಹಳ ದಿನಗಳೇನೂ ಉಳಿದಿಲ್ಲ. ಏಪ್ರಿಲ್ 26 ಮತ್ತು ಮೇ 7 ರಂದು ವೋಟಿಂಗ್ (voting) ನಡೆಯಲಿದೆ. ಪ್ರಮುಖ ಪಕ್ಷಗಳು ಪ್ರಚಾರ ಆರಂಭಿಸಿವೆ. ಚುನಾವಣೆ ಸಮಯದಲ್ಲಿ ಗಲಾಟೆಗಳು ನಡೆಯುವುದದು ಸಾಮಾನ್ಯ, ರೌಡಿ ಶೀಟರ್ ಮತ್ತು ಎಲ್ಲ ಊರು ನಗರಗಳಲ್ಲಿರುವ ಪುಡಿರೌಡಿಗಳಿಗೆ ಇದು ಸಂಪಾದನೆಯ ಸಮಯ. ರಾಜಕೀಯ ಪಕ್ಷಗಳು (political parties), ಅವುಗಳ ಮುಖಂಡರು ಗೂಂಡಾಗಳನ್ನು ಸಲಹುವುದು ನಮಗೆ ಗೊತ್ತಿರದ ವಿಷಯವೇನಲ್ಲ, ಚುನಾವಣೆ ಸಮಯದಲ್ಲಿ ಅವರನ್ನು ಹೆಚ್ಚೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಜನರನ್ನು ಹೆದರಿಸವುದು, ಗಲಭೆ ಸೃಷ್ಟಿಸುವುದು, ವೋಟು ನಮ್ಮ ನಾಯಕನಿಗೆ ಮಾತ್ರ ಹಾಕಬೇಕು ಅಂತ ಬೆದರಿಸುವುದು ಮೊದಲಾದ ಟಾಸ್ಕ್ ಗಳನ್ನು ರೌಡಿಗಳಿಗೆ ನೀಡಲಾಗುತ್ತದೆ. ಆದರೆ, ಜನ ಇಂಥದ್ದಕ್ಕೆಲ್ಲ ಹೆದರದೆ ನಿರ್ಭೀತಿ ಮತ್ತು ನಿರಾತಂಕದಿಂದ ತಮ್ಮ ಹಕ್ಕು ಚಲಾಯಿಸಲು ಮತ್ತು ಮತದಾನದ ಪ್ರಾಮುಖ್ಯತೆ ಮೂಡಿಸಲು ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಪಥಸಂಚಲನ ನಡೆಸಿದವು. ಇದು ಎಲ್ಲ ಕಡೆಗಳಲ್ಲಿ ನಡೆಯಬೇಕು, ಇದರಿಂದ ಗೂಂಡಾ, ರೌಡಿಗಳ ಹುಟ್ಟಡುಗುತ್ತದೆ ಅಂತಿಲ್ಲ, ಅವರಲ್ಲಿ ಕೊಂಚ ಭಯ ಮೂಡುತ್ತದೆ, ಆದರೆ ಜನರಲ್ಲಿ ಭಯ ಮಾಯವಾಗಲು ನೆರವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ ಹಿನ್ನೆಲೆ; ಬೆಂಗಳೂರಿನ ವಿವಿದೆಡೆ ನಾಕಾಬಂಧಿ