ದೇವನಹಳ್ಳಿ ಸುತ್ತಮುತ್ತ ದೇವಸ್ಥಾನಗಳನ್ನು ದೋಚುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಬಂಧನ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 2:35 PM

ಬಂಧಿತ ಕಳ್ಳರನ್ನು ಚಿಕ್ಕಬಳ್ಳಾಪುರದ ಗಂಗರಾಜು, ನಂದಕುಮಾರ್, ಮಹೇಶ್ ಮತ್ತು ಲೋಕೇಶ್ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಕಳ್ಳರು ತಾವು ಕಳ್ಳತನ ನಡೆಸಿದ ಸ್ಥಳಗಳ ಮತ್ತು ತಾವು ಕೃತ್ಯ ನಡೆಸಿದ ವಿಧಾನವನ್ನು ಪೊಲೀಸರಿಗೆ ವಿವರಿಸುತ್ತಿದ್ದಾರೆ.

ದೇವನಹಳ್ಳಿ: ರಾತ್ರಿ ಸಮಯದಲ್ಲಿ ದೇವನಹಳ್ಳಿ (Devanahalli) ಸುತ್ತಮುತ್ತ ಅಂಗಡಿ ಮತ್ತು ದೇವಾಸ್ಥಾನಗಳ ಕಿಟಕಿ ಬಾಗಿಲು ಮುರಿದು ಕಳ್ಳತನ ನಡೆಸುತ್ತಾ ಪೊಲೀಸರಿಗೆ ತಲೆನೋವಾಗಿದ್ದ ನಾಲ್ವರು ಸದಸ್ಯರ ತಂಡವೊಂದನ್ನು (gang) ಕೊನೆಗೂ ಬಲೆಬೀಸಿ ಬಂಧಿಸಲಾಗಿದೆ. ಬಂಧಿತ ಕಳ್ಳರನ್ನು ಚಿಕ್ಕಬಳ್ಳಾಪುರದ (Chikkaballapura) ಗಂಗರಾಜು, ನಂದಕುಮಾರ್, ಮಹೇಶ್ ಮತ್ತು ಲೋಕೇಶ್ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಕಳ್ಳರು ತಾವು ಕಳ್ಳತನ ನಡೆಸಿದ ಸ್ಥಳಗಳ ಮತ್ತು ತಾವು ಕೃತ್ಯ ನಡೆಸಿದ ವಿಧಾನವನ್ನು ಪೊಲೀಸರಿಗೆ ವಿವರಿಸುತ್ತಿದ್ದಾರೆ.