ಪೊಲೀಸರನ್ನು ಬೆದರಿಸಿದ ಪ್ರಕರಣ: ಬಿಜೆಪಿ ಶಾಸಕ ಹರೀಶ್ ಪೂಂಜಾ ಅರೆಸ್ಟ್ ಮಾಡಲು ಪೊಲೀಸರ ಅಗಮನ
ಇತ್ತೀಚಿಗೆ ಹರೀಶ್ ಪೂಂಜಾ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದರು ಮತ್ತು ಪೊಲೀಸರು ವಿಚಾರಿಸಲು ಹೋದಾಗ ಬೆದರಿಕೆ ಹಾಕಿದ್ದರಂತೆ. ಬೆಳ್ತಂಗಡಿಯ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಮನೆಯಲ್ಲಿ ಕೂತು ಅವರಿಗಾಗಿ ಕಾಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಮಂಗಳೂರು: ಇದು ಗರ್ಡಾಡಿ ಗ್ರಾಮದಲ್ಲಿರುವ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರ ನಿವಾಸ. ಮನೆಯ ಮುಂದೆ ಮತ್ತು ಒಳಗೂ ಪೊಲೀಸರು ನೆರೆದಿದ್ದಾರೆ. ಅಲ್ಲಿ ನಡಯುತ್ತಿರುವ ವಿದ್ಯಮಾನಗಳನ್ನು ನೋಡಲು ಊರಿನ ಜನ (local residents) ಶಾಸಕನ ಮನೆಯ ಮುಂದೆ ಜಮಾಯಿಸಿದ್ದಾರೆ. ಅಸಲಿಗೆ ವಿಷಯವೇನೆಂದರೆ ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ (threatened police) ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಆಗಮಿಸಿದ್ದಾರೆ. ಇತ್ತೀಚಿಗೆ ಹರೀಶ್ ಪೂಂಜಾ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದರು ಮತ್ತು ಪೊಲೀಸರು ವಿಚಾರಿಸಲು ಹೋದಾಗ ಬೆದರಿಕೆ ಹಾಕಿದ್ದರಂತೆ. ಬೆಳ್ತಂಗಡಿಯ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಮನೆಯಲ್ಲಿ ಕೂತು ಅವರಿಗಾಗಿ ಕಾಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪೊಲೀಸರನ್ನು ಕಾಯುವಂತೆ ಮಾಡಿ ಅವರ ತಾಳ್ಮೆಯ ಪರೀಕ್ಷೆ ಶಾಸಕ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿದೆ, ಶಿವರಾಜ ತಂಗಡಗಿ ಹೇಳಿಕೆಯೇ ಉದಾಹರಣೆ: ಹರೀಶ್ ಪೂಂಜಾ